ದೊಡ್ಡಬಳ್ಳಾಪುರ: ಆದರ್ಶ ಸಮಾಜ ಸೇವಾ ಸಂಘ(ರಿ) ಹಾಗೂ ರೈಸಿಂಗ್ ಇಂಡಿಯಾ ಪೀಪಲ್ ಟ್ರಸ್ಟ್ ಸಂಯುಕ್ತ ಆಶ್ರಯ ದಲ್ಲಿ ತಾಲೂಕಿನ ದೊಡ್ಡತುಮಕೂರು ಗ್ರಾಮದಲ್ಲಿ ಕಾರ್ಗಿಲ್ ವಿಜಯೋತ್ಸವ ಹಾಗೂ ವಿಶ್ವ ಪರಿಸರ ಸಂರಕ್ಷಣೆ ದಿನ ಆಚರಿಸಲಾಯಿತು.
ಈ ವೇಳೆ ಸಂಘದ ಅಧ್ಯಕ್ಷ ಸಿ. ರಾಮಕೃಷ್ಣಪ್ಪ ಹಾಗು ಮಾಜಿ ಗ್ರಾಪಂ ಅಧ್ಯಕ್ಷ ಟಿ.ಜಿ.ಮಂಜುನಾಥ್ ಮಾತನಾಡಿ,ಇಡೀ ಭಾರತದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸುತ್ತಿರುವುದು ದೇಶದ ಹಿರಿಮೆ ಹೆಗ್ಗಳಿಕೆ ಯೊಂದಿಗೆ ಯೋಧರಿಗೆ ಕೊಡುವ ಗೌರವ ,ಪ್ರತೀ ವರ್ಷ ಹುತಾತ್ಮ ಯೋಧರನ್ನು ಸ್ಮರಿಸಿದಾಗ ಹುತಾತ್ಮ ಯೋಧರ ಕುಟುಂಬಕ್ಕೆ ನಾವು ಕೊಡುವ ನೈತಿಕ ಬೆಂಬಲ ಉತ್ಸಾಹ ಎಂದು ತಿಳಿಸಿದರು.
ಯೋಧರ ಸವಿ ನೆನಪಿಗಾಗಿ ಲಕ್ಷಾಂತರ ಮಂದಿ ಲಕ್ಷಾಂತರ ಗಿಡಗಳನ್ನು ನೆಡುತಿದ್ದಾರೆ.ಆದರೆ,ಅವುಗಳನ್ನು ದೊಡ್ಡ ಮರ ಆಗುವವರೆಗೆ ಪೋಷಿಸಿದರೆ ಮಾತ್ರ ಸಾರ್ಥಕ ವಾಗುತ್ತದೆ, ಮರ ಗಿಡ ಬೆಳೆಸಿದರೆ ಮಾತ್ರ ಮುಂದಿನ ಪೀಳಿಗೆ ಒಳ್ಳೆಯ ವಾತಾವರಣದಲ್ಲಿ ಬದುಕಲು ಸಾಧ್ಯ,ಮುಂದಿನ ಪೀಳಿಗಿಗೆ ನಾವು ಕೊಡುವ ಅಪಾರ ಕಾಣಿಕೆ ಕಾಟಾಚಾರಕ್ಕೆ ಅಥವಾ ಪ್ರದರ್ಶನೆಗೆ ಮಾತ್ರ ಸೀಮಿತ ವಾಗಬಾರ ದೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾ ಪಂ ಮಾಜಿ ಅಧ್ಯಕ್ಷ ವಿ. ವೆಂಕಟೇಶ್,ವಿಎಸ್ ಎಸ್ ಎನ್ ನಿರ್ದೇಶಕ ಟಿ. ಎಚ್. ಶಿವಕುಮಾರ್,ಮುಖಂಡರಾದ ಟಿ ಪಿ. ಲೋಕೇಶ್,ಪ್ರಕಾಶ್,ಮುರುಳಿ,ಅಜಯ್,ಆನಂದ್,ಭಾಸ್ಕರ್,ವಸಂತ್,ರಘು,ನರೇಂದ್ರ,ಮದು,ಶ್ರೀನಿವಾಸ್,ಕುಶಾಲ್,ಲಕ್ಷ್ಮಣ್, ಅಂಜನಮುರ್ತಿ,ರಾಕೇಶ್,ರವಿ,ಬಾಲು, ಮುಂತಾದವರು ಬಾಗವಹಿಸಿದ್ದರು.