ಕಲ್ಯಾಣ್: ಚಲಿಸುತ್ತಿರುವ ರೈಲಿನಿಂದ ಕೆಳಗಿಳಿಯಲು ಪ್ರಯತ್ನಿಸಿ ರೈಲ್ವೆ ಫ್ಲಾಟ್ ಪಾರಂ ಮತ್ತು ಹಳಿ ಮದ್ಯೆ ಸಿಕ್ಕಿ ಪ್ರಾಣ ಕಳೆದುಕೊಳ್ಳುತ್ತಿದ್ದ ಪ್ರಯಾಣಿಕ ನೋರ್ವನನ್ನು ರೈಲ್ವೆ ರಕ್ಷಣಾ ಪಡೆ ಹಾಗೂ ಮಹಾರಾಷ್ಟ್ರದ ಭದ್ರತಾ ಪಡೆ ಸಿಬ್ಬಂದಿ ರಕ್ಷಸಿರುವ ಘಟನೆ ಮಂಗಳವಾರ ನಡೆದಿದೆ.
ಮಹಾರಾಷ್ಟ್ರದ ಕಲ್ಯಾಣ ನಗರದ ರೈಲ್ವೆ ನಿಲ್ದಾಣದಲ್ಲಿ. ಚಲಿಸುತ್ತಿದ್ದ ರೈಲಿನಿಂದ ಇಳಿಯುವ ವೇಳೆ 52 ವರ್ಷದ ಪ್ರಯಾಣಿಕ ನೋರ್ವ ಆಯತಪ್ಪಿ ಬಿದ್ದಿದ್ದು,ಸ್ಥಳದಲ್ಲಿಯೇ ಕರ್ತವ್ಯ ನಿರತ ರೈಲ್ವೆ ರಕ್ಷಣಾ ಪಡೆಯ ಕೆ ಸಾಹೋ ಮತ್ತು ಮಹಾರಾಷ್ಟ್ರದ ಭದ್ರತಾ ಪಡೆಯ ಸಿಬ್ಬಂದಿ ಸೊಮನಾಥ ಮಹಾಜನ್ ರಕ್ಷಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.