ದೊಡ್ಡಬಳ್ಳಾಪುರ: ಕರೊನಾ ವೈರಸ್ ಅವಾಂತರಗಳ ನಡುವೆಯೇ ನಾಳೆಯ ಶುಕ್ರವಾರದ ವರಮಹಾಲಕ್ಷ್ಮೀ ಹಬ್ಬದ ಸಡಗರದ ಸಿದ್ದತೆ ತಾಲೂಕಿನಲ್ಲಿ ಜೋರಾಗಿಯೇ ನಡೆದಿದೆ.
ನಗರದ ಎಪಿಎಂಸಿ ಆವರಣದ ಮಾರುಕಟ್ಟೆಯಲ್ಲಿ ವರ ಮಹಾಲಕ್ಷ್ಮೀ ಹಬ್ಬದ ಕಾರಣ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ವಸ್ತುಗಳ ಖರೀದಿ ಭರಾಟೆ ಜೋರಾಗೇ ಇತ್ತು. ಹೂವು, ಹಣ್ಣು, ಸೇರಿದಂತೆ ಅಗತ್ಯ ವಸ್ತುಗಳನ್ನು ಜನರು ಖರೀದಿಸುತ್ತಿದ್ದಾರೆ.
ಕರೊನಾಗೆ ಡೋಂಟ್ ಕೇರ್ ಎಂದ ಜನತೆ
ಹಲವು ತಿಂಗಳಿಂದ ಹಬ್ಬಗಳ ಸಂಭ್ರಮಕ್ಕೆ ಕರೊನಾ ಸೋಂಕು ತಡೆಯೊಡ್ಡಿತ್ತು.ಆದರೆ ವರಮಹಾಲಕ್ಷ್ಮೀ ಹಬ್ಬ ಕರೊನಾ ಸೋಂಕಿಗೆ ಡೊಂಟ್ ಕೇರ್ ಎನ್ನುವಂತೆ ಜನತೆ ಖರೀದಿ ನಡೆಸುತ್ತಿದ್ದು,ಮಾರುಕಟ್ಟೆಯಲ್ಲಿ ಜನಸಂದಣಿ ತುಂಬಿದ್ದಲ್ಲದೆ,ಟ್ರಾಫಿಕ್ ಜಾಮ್ ಉಂಟಾಗಿದೆ.