ದೊಡ್ಡಬಳ್ಳಾಪುರ: ಕರ್ನಾಟಕ ಹಾಲು ಮಾರಾಟ ಮಂಡಳಿಯ 992 ನೌಕರರಿಗೆ ವಿಮೆ ಮಾಡಿಸಲು ಆಡಳಿತ ಮಂಡಳಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು,ಜಗತ್ತಿನಾದ್ಯಂತ ಹರಡುತ್ತಿರುವ ಕರೊನಾ ವೈರಸ್ ಸಂದರ್ಭದಲ್ಲಿ ನಾಡಿನ ಗ್ರಾಹಕರಿಗೆ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ದಿನ ನಿತ್ಯ ತಲುಪಿಸುತ್ತಿರುವ ನಮ್ಮ ಸಂಸ್ಥೆಯ ನೌಕರರಿಗೆ 5 ಲಕ್ಷ ರೂ.ವರೆಗಿನ ಕೋವಿಡ್ ಆರೋಗ್ಯ ಸುರಕ್ಷತೆ ವಿಮೆಯನ್ನು ಮಾಡಿಸಲು ನಿರ್ಧರಿಸಲಾಗಿದೆ. ಈಗಾಗಲೇ 3 ಲಕ್ಷ ರೂ.ಗಳವರೆಗಿನ ಸಾಮಾನ್ಯ ಆರೋಗ್ಯ ವಿಮೆ ಸೌಲಭ್ಯವು ಕೂಡ ಕಹಾಮ ನೌಕರರಿಗೆ ಚಾಲ್ತಿಯಲ್ಲಿದೆ ಎಂದಿದ್ದಾರೆ.
ಇದೇ ವೇಳೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಗುಣ ಹೊಂದಿರುವ.ನಂದಿನಿ ಹಾಲು ಆರೋಗ್ಯದಾಯಕ,ಸಿರಿಧಾನ್ಯ,ಉತ್ಪನ್ನಗಳನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕಹಾಮ ಆಡಳಿತ ಮಂಡಳಿ ಸದಸ್ಯರಾದ ಎಚ್.ಡಿ. ರೇವಣ್ಣ, ಭೀಮಾನಾಯ್ಕ, ಎಚ್.ಜಿ. ಹಿರೇಗೌಡರ, ಮಾರುತಿ ಕಾಶಂಪೂರ, ದಿವಾಕರ ಶೆಟ್ಟಿ, ಶ್ರೀಶೈಲಗೌಡ ಪಾಟೀಲ, ಕೆ.ಎಸ್. ಕುಮಾರ, ಅಮರನಾಥ ಜಾರಕಿಹೊಳಿ, ಬಿ.ಸಿ.ಆನಂದಕುಮಾರ್,ಆರ್.ಶ್ರೀನಿವಾಸ್, ಎಂ. ನಂಜುಂಡಸ್ವಾಮಿ, ವೀರಭದ್ರ ಬಾಬು, ಪ್ರಕಾಶ, ಸಹಕಾರ ಸಂಘಗಳ ನಿಬಂಧಕ ಜಿಯಾವುಲ್ಲಾ, ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ ಹಾಗೂ ಇತರೇ ಕಹಾಮ ಅಧಿಕಾರಿಗಳು ಉಪಸ್ಥಿತರಿದ್ದರು.