ದೊಡ್ಡಬಳ್ಳಾಪುರ: ಕರೊನಾ ಕಾರಣ ಘೋಷಿಸಲಾದ ಲಾಕ್‌ಡೌನ್ ಸೇರಿದಂತೆ ವಿವಿಧ ಕಾರಣಗಳಿಂದ ಉಂಟಾಗಿರುವ ರಕ್ತದ ಕೊರತೆ ನೀಗಿಸುವ ಹೊಣೆ ನಮ್ಮದಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿಳಿಸಿದರು.
ಭಾರತೀಯ ಜನತಾ ಪಾರ್ಟಿ ನಗರ ಯುವ ಮೋರ್ಚಾ ಹಾಗೂ ಹಿಂದುಳಿದ ವರ್ಗದ ಮೋರ್ಚಾದ ವತಿಯಿಂದ,ಚಂದ್ರಶೇಖರ್ ಆಜಾದ್ ಅವರ ಹುಟ್ಟು ಹಬ್ಬದ ಪ್ರಯುಕ್ತ ನಗರದ ನಂಜುಂಡೇಶ್ವರ ಕಲ್ಯಾಣ ಮಂಟಪ ಹಾಗೂ ಡಿಪಿವಿ ಕನ್ವೆಂಷನ್ ಹಾಲ್ ನಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರೊನಾ ಸೋಂಕಿನ ಹಾವಳಿಯಿಂದ ಬ್ಲೆಡ್ ಬ್ಯಾಂಕ್ ಗಳಿಗೆ ರಕ್ತದ ಶೇಖರಣೆ ಕಡಿಮೆಯಾಗಿದ್ದು,ತುರ್ತು ಸಂಧರ್ಭದಲ್ಲಿ ತೊಂದರೆ ಉಂಟಾಗುತ್ತಿದೆ.ಈ ನಿಟ್ಟಿನಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಿ ರಕ್ತದ ಕೊರತೆ ಹೆಚ್ಚಿಸಬೇಕಿದೆ,ಆದರೆ ಕರೊನಾ ಸೋಂಕಿನ ಮುಂಜಾಗ್ರತೆ ಅಗತ್ಯವಾಗಿ ವಹಿಸಬೇಕೆಂದರು.
ಈ ವೇಳೆ ದೊಡ್ಡಬಳ್ಳಾಪುರ ತಾಲೂಕು ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷರನ್ನಾಗಿ ಶಿವು ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಿ,ಜಿಲ್ಲಾ ವಕ್ತಾರ ಪುಷ್ಪ ಶಿವಶಂಕರ್,ತಾಲೂಕ್ ಘಟಕದ ಅಧ್ಯಕ್ಷ ಟಿ.ಎನ್. ನಾಗರಾಜು,ನಗರ ಘಟಕದ ಅಧ್ಯಕ್ಷ ಎಚ್.ಎಸ್.ಶಿವಶಂಕರ್,ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್,ಬಿಜೆಪಿ ಹಿರಿಯ ಮುಖಂಡರಾದ ಬಿ.ಸಿ.ನಾರಾಯಣಸ್ವಾಮಿ, ಸಿ.ನಾರಾಯಣಸ್ವಾಮಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿನೋದ್ ರೆಡ್ಡಿ,ಜಿಲ್ಲಾ ಖಜಾಂಚಿ ಶಿವಾನಂದರೆಡ್ಡಿ,ಪ್ರಧಾನ ಕಾರ್ಯದರ್ಶಿ ಶಿವು,ನಗರ ಘಟಕದ ಅಧ್ಯಕ್ಷ ಕೆ.ಎಸ್.ಮಂಜುನಾಥ್,ನಗರ ಪ್ರದಾನ ಕಾರ್ಯದರ್ಶಿ ಮುನಿರಾಜು,ತಾಲೂಕು ಯುವ ಮೋರ್ಚಾ ಅಧ್ಯಕ್ಷ ಕಿರಣ್ ಗೌಡ,ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಿರಿಜಾ,ತಾಲೂಕು ಅಧ್ಯಕ್ಷೆ ಲೀಲಾವತಿ,ನಗರ ಘಟಕದ ಅಧ್ಯಕ್ಷೆ ಮಂಜುಳಮ್ಮ ಮತ್ತಿತರಿದ್ದರು.