ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಸೋಮವಾರ ವೇಳೆಗೆ ಐದು ಮಂದಿಗೆ ಸೋಂಕು ದೃಢಪಟ್ಟು,ಇಪ್ಪತ್ತೊಂದು ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ಸೋಮವಾರದ ಕರೊನಾ ಬುಲೆಟಿನ್ ವರದಿಯಂತೆ,ಐದು ಜನ ಪುರುಷರಿಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಹರಿತಲೇಖನಿಗೆ ದೊರೆತಿರುವ ಮಾಹಿತಿಯ ಅನ್ವಯ. ಕನಸವಾಡಿ ಸಮೀಪದ ಮಾರಸಂದ್ರ 1, ಮುತ್ತೂರು 1, ಕೆಂಪೇಗೌಡ ನಗರ 1, ಚಿಕ್ಕತುಮಕೂರು 1 ಹಾಗೂ ಬಾಶೆಟ್ಟಿಹಳ್ಳಿಯ ಓರ್ವ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ
ಪ್ರಸ್ತುತ ತಾಲೂಕಿನಲ್ಲಿ 521 ಕರೊನಾ ಪ್ರಕರಣಗಳಾಗಿದ್ದು,16 ಮಂದಿ ಮೃತ ಪಟ್ಟು, 261 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಸೋಂಕಿಗೆ ಒಳಗಾದ 24 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 261 ಮಂದಿಯನ್ನು ದೇವನಹಳ್ಳಿ / ಹಜ್ ಭವನ /ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.