ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಇಂದು ಇಪ್ಪತ್ನಾಲ್ಕು ಮಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು 253 ಮಂದಿ ಕರೊನಾ ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ಬುಲೆಟಿನ ಅನ್ವಯ.
ಬುಧವಾರ ಸಂಜೆಯ ವರಗೆ ದೊಡ್ಡಬಳ್ಳಾಪುರ ತಾಲ್ಲೂಕಿನ 18 ಮಂದಿ ಗಂಡು ಹಾಗೂ 6 ಮಂದಿ ಮಹಿಳೆಯರು ಸೇರಿ ಇಪ್ಪತ್ನಾಲ್ಕು ಜನರಿಗೆ ಸೋಂಕು ದೃಢ ಪಟ್ಟಿದೆ.
ಹರಿತಲೇಖನಿಗೆ ದೊರಕಿರುವ ವರದಿಯಂತೆ. ಕರೇನಹಳ್ಳಿ 1, ಇಸ್ಲಾಂಪುರ 1, ಶ್ರೀನಗರ 1, ರೈಲ್ವೆ ಸ್ಟೇಷನ್ 1, ಚಿಕ್ಕಪೇಟೆ 1, ಬ್ಯಾಂಕ್ ಸರ್ಕಲ್ 4, ಬಾಶೆಟ್ಟಿಹಳ್ಳಿ 2, ರಾಜಘಟ್ಟ 1, ಕಂಟನಕುಂಟೆ 1, ಪಾಲ್ ಪಾಲ್ ದಿನ್ನೆ 1, ಗುಂಜೂರು 3, ಶಾಂತಿನಗರ 2, ಚಿಕ್ಕತುಮಕೂರು 3, ಪೊಲೀಸ್ ಕ್ವಾಟ್ರಸ್ 1 ಹಾಗೂ ಕೊಂಗಾಡಿಯಪ್ಪ ಕಾಲೇಜು ರಸ್ತೆಯಲ್ಲಿ ಒಂದು ಪ್ರಕರಣ ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 581 ಮಂದಿ ಸೋಂಕು ತಗುಲಿದ್ದು,253 ಮಂದಿ ಗುಣಮುಖರಾಗಿದ್ದರೆ 16 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 29 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 283 ಮಂದಿಯನ್ನು ದೇವನಹಳ್ಳಿ/ಹಜ್ ಭವನ/ಖಾಸಗಿ ಆಸ್ಪತ್ರೆ /ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.