ದೊಡ್ಡಬಳ್ಳಾಪುರ: ಜುಲೈ ತಿಂಗಳ ಅಂತ್ಯದ ವೇಳೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕಾಮಗಾರಿಗಳು ಮತ್ತು ಮಾನವ ದಿನಗಳನ್ನು ಸೃಷ್ಟಿಸುವ ಮೂಲಕ ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿ ಸಾಧನೆಗೈದಿದೆ.
ಯೋಜನೆಯಡಿ ದೊಡ್ಡಬಳ್ಳಾಪುರ ತಾಲ್ಲೂಕಿಗೆ ಜುಲೈ ಅಂತ್ಯದವರೆಗೆ 1.62.798 ಮಾನವ ದಿನಗಳ ಗುರಿಯನ್ನು ನೀಡಲಾಗಿದ್ದು,ಅದರಂತೆ ತಾಲ್ಲೂಕಿನಲ್ಲಿ 2.13.076 ಮಾನವ ದಿನಗಳ ಗುರಿಯನ್ನು ಸಾದಿಸಿದ್ದು, ಶೇ.130.88% ರಷ್ಟು ಸಾಧನೆಯನ್ನು ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಅತೀ ಹೆಚ್ಚು ಮಾನವ ದಿನಗಳನ್ನು ಸೃಜಿಸಿದ ಮೊದಲ ತಾಲ್ಲೂಕು ಎಂಬ ಕೀರ್ತಿ ದೊಡ್ಡಬಳ್ಳಾಪುರದ್ದು
ನರೇಗಾ ಯೋಜನೆಯಡಿ ಈ ವರ್ಷದಲ್ಲಿ ಈಗಾಗಲೇ 415 ಬದು ನಿರ್ಮಾಣ ಕಾಮಗಾರಿಗಳು, 96 ಕೃಷಿ ಹೊಂಡ ನಿರ್ಮಾಣ ಕಾಮಗಾರಿಗಳು, 85 ಕಿಚನ್ ಗಾರ್ಡನ್ ಕಾಮಗಾರಿಗಳು, 220 ಸೋಕ್ ಪಿಟ್ ಕಾಮಗಾರಿಗಳು, 83 ಗೋಕಟ್ಟೆಗಳು ಸೇರಿದಂತೆ ಕುಡಿಯುವ ನೀರಿನ ತೊಟ್ಟಿಗಳು, ಉದ್ಯಾನವನ, ಶಾಲಾ ಕಾಂಪೌಂಡ್, ಕೆರೆ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ.
ಉಳಿದಂತೆ ಜುಲೈ ತಿಂಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ 46072, ಹೊಸಕೋಟೆ 69319,ನೆಲಮಂಗಲ 39187 ಹಾಗೂ ದೊಡ್ಡಬಳ್ಳಾಪುರ 70620 ಮಾನವ ದಿನಗಳ ಸೃಜನೆ ಗುರಿ ಸಾಧಿಸಿವೆ.
ನರೇಗಾ ಕಾಮಗಾರಿಯ ಯಶಸ್ಸಿನಲ್ಲಿ ತಾಪಂ ಇಒ ಮುರುಡಯ್ಯ,ಸಹಾಯಕ ನಿರ್ದೇಶಕಿ ಸಿ.ಗೀತಾಮಣಿ ಸೇರಿದಂತೆ ತಾಪಂ ಸದಸ್ಯರು ಹಾಗೂ ಪಿಡಿಒಗಳು ಮತ್ತು ತಾಂತ್ರಿಕ ವರ್ಗದ ಪಾತ್ರ ಅಪಾರವಾಗಿದೆ.