October 8, 2024 9:28 pm

ಸಂಭ್ರಮ, ಸಾರ್ಥಕ್ಯದ ಈ ಕ್ಷಣದಲ್ಲಿ ಅಪಮಾನದ ದಳ್ಳುರಿ ನೆನೆಯುತ್ತಾ

ಇದು ಸಾರ್ಥಕ್ಯದ ಕ್ಷಣ ! ಇಂದು ನಮ್ಮತನವನ್ನು ಉಳಿಸಿಕೊಂಡ ಕ್ಷಣ. ನಾವು ನರಸತ್ತವರಲ್ಲ ಎಂದು ಜಗತ್ತಿಗೆ ಸಾರಿದ ದಿನ. ನಮ್ಮ ಮಾನ-ಮರ್ಯಾದೆ ಉಳಿಸಿಕೊಂಡ ದಿನ. ಇಂದು ನಮ್ಮತನವನ್ನು ಉಳಿಸಿಕೊಂಡು ಮನುಷ್ಯರಾಗಿ, ಸ್ವಾಭಿಮಾನಿಗಳಾಗಿ, ಮರ್ಯಾದಸ್ಥರಾಗಿ, ಮಾನವಂತರಾಗಿ ಬಾಳಲು ಅನುವು ಮಾಡಿಕೊಟ್ಟ ದಿನ. ಇಷ್ಟು ದಿನಗಳ ಭಾರತವೇ ಒಂದು. ರಾಮ ಮಂದಿರಕ್ಕೆ ಶಂಕುಸ್ಥಾಪನೆಯಾದ ನಂತರದ ಭಾರತವೇ ಮತ್ತೊಂದು. ಇಂದು ನಮ್ಮ ದೇಶ ನಿಜವಾದ ಅರ್ಥದಲ್ಲಿ ವಿಶ್ವದ ಎದುರು ಗರ್ವದಿಂದ ತಲೆಯೆತ್ತಿ ನಿಲ್ಲಬಹುದು. 

ಹೀಗಾಗಿ ರಾಮ ಜನ್ಮಭೂಮಿ ಹೋರಾಟದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಶಿರಬಾಗಿ ನಮಿಸುತ್ತೇನೆ. ನಮ್ಮ ಮಾನ ಕಾಪಾಡಿದ ಸರ್ವರಿಗೂ ಮನಸಾರೆ ನಮಿಸುತ್ತೇನೆ. ರಾಮ ಮಂದಿರ ನಿರ್ಮಾಣ ಕನಸನ್ನು ನನಸು ಮಾಡಿ, ಈ ದೇಶದ ಅಸ್ಮಿತೆಯನ್ನು ಕಾಪಾಡಿದ ಪ್ರತಿಯೊಬ್ಬರಿಗೂ ನನ್ನ ನಮಸ್ಕಾರಗಳು ಸಲ್ಲುತ್ತವೆ. 

ಅತ್ತ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆಯಾಗುತ್ತಿದೆ. ಆದರೆ ಈ ಸಾರ್ಥಕ್ಯದ ಕ್ಷಣದಲ್ಲಿ ಇದಕ್ಕೆ ಸಂತೋಷಪಡಬೇಕೋ, ಸಂಭ್ರಮಿಸಬೇಕೋ, ದುಃಖಿಸಬೇಕೋ, ಹಣೆಹಣೆ ಚಚ್ಚಿಕೊಳ್ಳಬೇಕೋ ಒಂದೂ ಗೊತ್ತಾಗುತ್ತಿಲ್ಲ. ರಾಮ ಹುಟ್ಟಿದ ದೇಶದಲ್ಲಿ ರಾಮನಿಗೊಂದು ಮಂದಿರ ಕಟ್ಟಲು ಎಂಟು ದಶಕಗಳ ಹೋರಾಟ ಮಾಡಬೇಕಾಯಿತಾ ಎಂಬುದೇ ಕರುಳು ಕಿತ್ತು ಬರುವ ವಿದ್ರಾವಕ ಕಥೆ-ವ್ಯಥೆ. ಇದನ್ನು ಹೇಳಿಕೊಂಡರೆ ಇಡೀ ವಿಶ್ವವೇ ನಮ್ಮನ್ನು ನೋಡಿ ನಗುತ್ತದೆ. ಶ್ರೀ ರಾಮನ ಜನ್ಮ ಸ್ಥಾನದಲ್ಲಿ, ಅವನಿಗೊಂದು ಮಂದಿರ ಕಟ್ಟಲು ಇಷ್ಟೆಲ್ಲಾ ಹೋರಾಡಬೇಕಾಯಿತಾ ಎಂದು ಯಾರಾದರೂ ಕೇಳಿದರೆ, ಅದರಂಥ ಅಪಮಾನ, ವಿಡಂಬನೆ , ಚೋದ್ಯ, ಕುಹಕ ಮತ್ತೇನಿದೆ ? ಇಷ್ಟೆಲ್ಲಾ ಗೊಂದಲ, ಹೋರಾಟ, ಅಪಸವ್ಯಗಳ ಮಧ್ಯದಲ್ಲಿ ಕೊನೆಗೂ ರಾಮನಿಗೊಂದು ಮಂದಿರ ನಿರ್ಮಿಸಲು ಶಂಕುಸ್ಥಾಪನೆ ಆಗುತ್ತಿದೆಯಲ್ಲ ಎಂದು ಸಮಾಧಾನಪಟ್ಟುಕೊಳ್ಳಬೇಕು, ಸಂಭ್ರಮಪಡಬೇಕು. 

ಅಷ್ಟಕ್ಕೂ ಶ್ರೀರಾಮನಿಗೊಂದು ಮಂದಿರ ಆಗಬೇಕು ಎಂದು ಹೋರಾಟ ಮಾಡಿದ್ದು ಬೇರೆಲ್ಲೂ ಅಲ್ಲ, ಅವನ ಜನ್ಮ ಸ್ಥಾನವಾದ ಅಯೋಧ್ಯೆಯಲ್ಲಿ. ಅಯೋಧ್ಯೆಯಿರುವುದು ನ್ಯೂಯಾರ್ಕ್, ಟೊರಾಂಟೊ, ಲಂಡನ್, ಸಿಂಗಾಪುರ, ಬೀಜಿಂಗ್, ದುಬೈ, ಇಸ್ಲಾಮಾಬಾದಿನಲ್ಲಿ ಅಲ್ಲ.. ಅದು ಇರುವುದು ಭಾರತದಲ್ಲಿ. ಈ ದೇಶದ ಕೋಟ್ಯಂತರ ಜನರಿಗೆ ಶ್ರೀರಾಮ ಆರಾಧ್ಯದೈವ. ಜನಮಾನಸದಲ್ಲಿ ಶ್ರೀರಾಮ ಅಂದರೆ ಮರ್ಯಾದ ಪುರುಷೋತ್ತಮ. ಅವನ ಫೋಟೋಗಳಿಲ್ಲದ ಮನೆಗಳಿಲ್ಲ. ಅವನ ಜಪ ಮಾಡದ, ಸ್ಮರಣೆ ಮಾಡದ  ಮನಗಳಿಲ್ಲ. ಇಂದಿಗೂ ಭಾರತದಲ್ಲಿ ನೆಲೆಸಿರುವ ಅಸಂಖ್ಯ ಜನರಿಗೆ ಶ್ರೀರಾಮ ಸ್ಮರಣೆಯೇ ಉಸಿರು. ಅವನ ಹೆಸರನ್ನು  ಹೇಳದೇ ಬೆಳಗಾಗುವುದಿಲ್ಲ. ಹಸಿವಾಗಲಿ, ದಣಿವಾಗಲಿ, ಕಷ್ಟ ಬರಲಿ, ಸುಖವಿರಲಿ, ‘ಶ್ರೀರಾಮ‘ ಎನ್ನಬೇಕು. ನರ ಜನ್ಮ ಬಂದಾಗ, ನಾಲಗೆ ಇರುವಾಗ ರಾಮ ಎನ್ನದಿದ್ದರೆ ಅದೂ ಒಂದು ಜೀವನವಾ ಎಂದು ನಂಬಿದ, ನಂಬಿದ್ದನ್ನು ಆಚರಿಸಿದ ದೇಶವಿದು. ಭಾರತದಲ್ಲಿ ಶ್ರೀರಾಮ ಕೇವಲ ದೇವರೊಂದೇ ಅಲ್ಲ. ಆತ ಒಂದು ಉದಾತ್ತ ಆದರ್ಶ. ರಾಮ ಒಂದು ಮಾದರಿ. ರಾಮ ಒಂದು ಸಂಸ್ಕಾರ. ರಾಮ ಒಂದು ಸಂಸ್ಕೃತಿ. ರಾಮ ಒಂದು ಆಚರಣೆ, ಸಂಪ್ರದಾಯ. ರಾಮ ಒಂದು ಜೀವನ ವಿಧಾನ. ರಾಮ ಒಂದು ಉಜ್ವಲ ಬದುಕಿನ ಪದ್ಧತಿ. ರಾಮ ಒಂದು ದಾರಿದೀಪ. 

ಅಷ್ಟೇ ಅಲ್ಲ, ರಾಮ ಸರ್ವಸ್ವ! 

‘ರಾಮ ರಾಜ್ಯ‘ ಎನ್ನುವುದು ಇಂದಿಗೂ ಉತ್ತಮ ಆಡಳಿತಕ್ಕೊಂದು ಪರ್ಯಾಯ ಪದ. ಮಹಾತ್ಮ ಗಾಂಧಿಯವರು ಸದಾ ರಾಮರಾಜ್ಯಕ್ಕಾಗಿ ಹಂಬಲಿಸುತ್ತಿದ್ದರು. ರಾಮಾಯಣದ ಸಂಪೂರ್ಣ ಸಾರ ಮಾನವನ ಆದರ್ಶ ನಡೆವಳಿಕೆ ಮತ್ತು ಉದಾತ ನೈತಿಕ ಮೌಲ್ಯದ ಸುತ್ತ ಹೆಣೆದುಕೊಂಡಿದೆ. ರಾಮಾಯಣ ಕೇವಲ ಕಟ್ಟುಕತೆ ಎಂಬ ಭಾವನೆ ಯಾರಲ್ಲೂ ಇಲ್ಲ. ಅದು ಭಾಷಾತೀತ. ಜಾತಿ-ಮತ-ಧರ್ಮದ ಕಟ್ಟುಪಾಡಿಲ್ಲದೆ ಬಾಯಿಂದ ಬಾಯಿಗೆ ಹರಿದು ಬಂಡ ಮಹಾಕಾವ್ಯ. ಶ್ರೀಮಾನ್ ಹೆಸರು ಹೇಳದ, ಕೇಳದ ಜಾತಿ ಅಥವಾ ಜನಾಂಗ ಭಾರತದಲ್ಲಿ ಇಲ್ಲವೇ ಇಲ್ಲ. ತುಳಸೀದಾಸರಿಂದ ಸೂರದಾಸರ ತನಕ, ಕಬೀರರಿಂದ ತುಕಾರಾಮ ತನಕ, ಅಸ್ಸಾಮಿನ ಶಂಕರದೇವರಿಂದ ತಮಿಳುನಾಡಿನ ಕಂಬರ ತನಕ, ಭಾರತದ ಚರಿತ್ರೆಯಲ್ಲಿ ದಾಖಲಾಗಿರುವ ಪ್ರತಿಯೊಬ್ಬ ಸಂತರೂ, ತಮ್ಮ ಸಾಮಾಜಿಕ ಸುಧಾರಣೆಯ ಮಹಾಯಜ್ಞದಲ್ಲಿ ರಾಮಾಯಣವನ್ನು ಬಳಸಿಕೊಂಡಿದ್ದಾರೆ. ಅವರೆಲ್ಲರಿಗೂ ಶ್ರೀರಾಮನೇ ಆದರ್ಶ. ಸಿಖ್ ರ ಗುರು ಗ್ರಂಥ ಸಾಹೀಬ್ ನಲ್ಲಿ ಎರಡು ಸಾವಿರದಾ ಐನೂರಕ್ಕಿಂತ ಹೆಚ್ಚು ಸಲ ಶ್ರೀರಾಮನ ಹೆಸರನ್ನು ಪ್ರಸ್ತಾಪಿಸಲಾಗಿದೆ. 

ಮಹಾತ್ಮ ಗಾಂಧಿಯವರು ಅನುಗಾಲವೂ ರಾಮನಾಮ ಜಪಿಸುತ್ತಿದ್ದರು. ‘ರಾಮ’ ಎನ್ನುವುದು ಹಿಂದುಗಳಿಗೆ ಮಾತ್ರ ಸೀಮಿತವಲ್ಲ, ಅದು ವಿಶ್ವ ಭ್ರಾತೃತ್ವ, ಭಾರತದ ಏಕತೆ ಮತ್ತು ಸಮಗ್ರತೆ ಸಾಧಿಸುವ ಆಧ್ಯಾತ್ಮಿಕ ಶಕ್ತಿ ಎಂದು ಅವರು ಪ್ರತಿಪಾದಿಸಿದ್ದರು. ಗಾಂಧೀಜಿ ಅವರ ಪ್ರತಿದಿನದ ಸಾಮೂಹಿಕ ಪ್ರಾರ್ಥನೆ ‘ರಘುಪತಿ ರಾಘವ ರಾಜಾರಾಮ್, ಪತಿತ ಪಾವನ ಸೀತಾರಾಮ್, ಈಶ್ವರ ಅಲ್ಲಾ ತೇರೋ ನಾಮ್, ಸಬಕೋ ಸನ್ಮತಿ ದೇ ಭಗವಾನ್’ ಎನ್ನದೆಯೆಂದೂ ಪೂರ್ಣಗೊಳ್ಳುತ್ತಿರಲಿಲ್ಲ. ರಾಮರಾಜ್ಯ ಅಂದರೆ ಹಿಂದೂ ರಾಜ್ಯ ಅಲ್ಲ, ಯಾವುದಕ್ಕೂ ಕೊರತೆ ಇಲ್ಲದ, ಅಧರ್ಮಕ್ಕೆ ಅವಕಾಶ ಇಲ್ಲದ ದೇವರ ರಾಜ್ಯ ಎಂದು ಸ್ವತಃ ಗಾಂಧೀಜಿ ಅನೇಕ ಸಲ ಸ್ಪಷ್ಟಪಡಿಸಿದ್ದಾರೆ. ಗಾಂಧೀಜಿ ಅವರು ಕೊನೆಯುಸಿರೆಳೆಯುವ ಮುನ್ನ ಹೇಳಿದ್ದು ‘ಹೇ ರಾಮ್’. ಒಟ್ಟಾರೆ ಶ್ರೀರಾಮ ರಾಷ್ಟ್ರೀಯತೆ, ಏಕತೆ, ಸಹೋದರತ್ವ, ಸಮಗ್ರತೆಯ ಅನನ್ಯ ಸಂಕೇತ. ಇಷ್ಟೆಲ್ಲಾ ವಿಶೇಷಣ ಹೊಂದಿರುವ ಶ್ರೀರಾಮನ ಜನ್ಮಸ್ಥಾನ , ಆತನ ಸಾಮ್ರಾಜ್ಯದ ರಾಜಧಾನಿಯಾದ ಅಯೋಧ್ಯೆ ಅಸಂಖ್ಯ ಹಿಂದೂಗಳ ಶ್ರದ್ಧೆ ಮತ್ತು ಭಕ್ತಿಯ ಕೇಂದ್ರವಾಗಿದ್ದು ತೀರಾ ಸಹಜ. 

ಅಂಥ  ಶ್ರೀರಾಮನಿಗೆ ಆತ ಜನಿಸಿದ ಪರಮಪುಣ್ಯ ಭೂಮಿಯಲ್ಲಿ,  ಒಂದು ಮಂದಿರ ಕಟ್ಟಿಕೊಡಲು ಇಷ್ಟೆಲ್ಲಾ ಕಸರತ್ತು ಮಾಡಬೇಕಾಯಿತಾ ? 

ಮತ್ತೊಮ್ಮೆ ಹೇಳುತ್ತೇನೆ.. ಅಷ್ಟಕ್ಕೂ ಶ್ರೀರಾಮನ ಮಂದಿರ ಕಟ್ಟುತ್ತೇವೆ ಎಂದು ಹೇಳಿದ್ದು  ನ್ಯೂಯಾರ್ಕ್ ನಲ್ಲಿ ಅಲ್ಲ, ಟೊರಾಂಟೊದಲ್ಲಿ ಅಲ್ಲ, ಲಂಡನ್ ನಲ್ಲಲ್ಲ, ಸಿಂಗಾಪುರದಲ್ಲಲ್ಲ , ಬೀಜಿಂಗ್ ನಲ್ಲಲ್ಲ , ದುಬೈಯಲ್ಲಲ್ಲ , ಮೆಕ್ಕಾದಲ್ಲಿ ಅಲ್ಲ, ಇಸ್ಲಾಮಾಬಾದಿನಲ್ಲಂತೂ ಅಲ್ಲವೇ ಅಲ್ಲ. 

ಶ್ರೀರಾಮ ಜನಿಸಿದ ಅಯೋಧ್ಯೆಯಲ್ಲಿ, ಭಾರತದಲ್ಲಿ,  ನಮ್ಮ ಮಾತೃಭೂಮಿಯಲ್ಲಿ! ಅದಕ್ಕೆ ಇಷ್ಟೆಲ್ಲಾ ಬಡಿದಾಡಬೇಕಾಯಿತಾ? ಹೋರಾಡಬೇಕಾಯಿತಾ? ರಕ್ತ ಸುರಿಸಬೇಕಾಯಿತಾ ? ಅಪಮಾನದಿಂದ ತಲೆ ತಗ್ಗಿಸಬೇಕಾಯಿತಾ ? ಯೋಚಿಸಿದರೆ ರಕ್ತ ಕುದಿಯುತ್ತದೆ. ಇಷ್ಟು ವರ್ಷ ಅದೆಂಥ ದೈನೇಸಿ ಬದುಕನ್ನು ಬಾಳಿದೆವು?  ನಮ್ಮ ಅಸ್ಮಿತೆಯನ್ನು ಮರೆತು ದಾಸರಾಗಿ ಬಾಳಿದೆವು ? ಇಂಗ್ಲೆಂಡಿನಲ್ಲೋ, ಪ್ಯಾರಿಸ್ಸಿನಲ್ಲೋ, ಶಿಕಾಗೋದಲ್ಲೋ ಒಂದು ಚರ್ಚ್ ನಿರ್ಮಿಸಲು ಹೋರಾಟ ಮಾಡಿದ್ದನ್ನು ಕೇಳಿದ್ದೀರಾ ? ಅರಬ್ ರಾಷ್ಟ್ರಗಳಲ್ಲಿ ಮಸೀದಿ ನಿರ್ಮಿಸಲು ಯಾರಾದರೂ ಆಂದೋಲನ ಮಾಡಿದ್ದನ್ನು ಕೇಳಿದ್ದೀರಾ ? ಜಗತ್ತಿನ ಯಾವುದೇ ರಾಷ್ಟ್ರದಲ್ಲಿ ಚರ್ಚ್ ಮತ್ತು ಮಸೀದಿ ನಿರ್ಮಾಣ ವಿರೋಧಿಸಿ ಯಾರಾದರೂ ಕೋರ್ಟಿಗೆ ಹೋಗಿದ್ದಾರಾ ? ಅಲ್ಲಿ ಏಳೆಂಟು ದಶಕಗಳ ಕಾಲ ಹೋರಾಡಿದ್ದಾರಾ ? ಹೇಳಿ. 

ಇಂಪಾಸಿಬಲ್… ಇಲ್ಲವೇ ಇಲ್ಲ. ಮಾನವ ಚರಿತ್ರೆಯಲ್ಲೇ ಇಂಥ ಮತ್ತೊಂದು ನಿದರ್ಶನ ಸಿಗಲಿಕ್ಕಿಲ್ಲ. ಅಷ್ಟಕ್ಕೂ ಹಿಂದೂಗಳು ಮೆಕ್ಕಾ-ಮದೀನಾಕ್ಕೆ ಹೋಗಿ ಮಂದಿರ ಕಟ್ಟುತ್ತೇವೆ ಎಂದು ಹೇಳಲಿಲ್ಲ. ನಮಗೆ ಅಲ್ಲಿ ಯಾವ ಮೋಹವೂ ಇಲ್ಲ. ಶತಶತಮಾನಗಳಿಂದ ನಂಬಿಕೊಂಡು ಬಂದ, ನಮ್ಮ ಶ್ರದ್ಧಾಕೇಂದ್ರವಾದ ಅಯೋಧ್ಯೆಯಲ್ಲಿ, ನಮ್ಮ ಆರಾಧ್ಯದೈವವಾದ ಶ್ರೀರಾಮನಿಗೊಂದು ಮಂದಿರ ನಿರ್ಮಿಸುತ್ತೇವೆ ಅಂದರೆ, ಅದಕ್ಕೆ ಈ ದೇಶದಲ್ಲಿ ಅಷ್ಟೊಂದು ವಿರೋಧವಾ ? ಅದಕ್ಕೆ ಇಷ್ಟೊಂದು ಹೆಣಗಳು ಉರುಳಬೇಕಾ ? ಇಷ್ಟೆಲ್ಲಾ ರಾದ್ಧಾಂತಗಳಾಗಬೇಕಾ ? ಹಾಗಂತ ಈ ದೇಶದಲ್ಲಿ ಪ್ರತಿ ಊರಲ್ಲಿ, ಪ್ರತಿ ಬಡಾವಣೆಗಳಲ್ಲಿ ಸಹ ಮಸೀದಿಗಳಿವೆ. ಮಸೀದಿ ನಿರ್ಮಿಸಲು ಯಾರ ವಿರೋಧವೂ ಇಲ್ಲ. ಯಾವುದೇ ಧರ್ಮದವರು ತಮ್ಮ ಶ್ರದ್ಧಾ ಕೇಂದ್ರಗಳನ್ನು ನಿರ್ಮಿಸಲು ತುಂಬು ಮನಸ್ಸಿನಿಂದ ಅನುಮತಿ ನೀಡುವ, ಅನುಭೂ ಮಾಡಿಕೊಡುವ ದೇಶವೆಂದರೆ ಭಾರತವೊಂದೇ. ಅಂಥದರಲ್ಲಿ ಭಾರತದಲ್ಲಿ ಶ್ರೀರಾಮ ಹುಟ್ಟಿದ ಸ್ಥಳದಲ್ಲಿ ಮಂದಿರ ಕಟ್ಟಲು ಬಿಡಲಿಲ್ಲವಲ್ಲಾ… ಇದಕ್ಕೇನನ್ನೋಣ?! 

ಹೀಗಾಗಿ ನನಗೆ ಈ ಸಂತಸದ, ಸಂಭ್ರಮದ ಕ್ಷಣದಲ್ಲೂ ಅಪಮಾನದ ಘೋರ ಕಹಿನೆನಪು ಕರುಳು ಹಿಂಡುತ್ತಿದೆ. ಶ್ರೀರಾಮನ ಮಂದಿರ ನಿರ್ಮಾಣಕ್ಕಾಗಿ ಏನೆಲ್ಲಾ ರಾಜಕೀಯಗಳು ಆಗಿ ಹೋದವು ಎಂಬುದನ್ನು ನೆನಪಿಸಿಕೊಂಡರೆ ಬೇಸರವಾಗುತ್ತದೆ. ಮಂದಿರ ನಿರ್ಮಾಣಕ್ಕಾಗಿ ಪಟ್ಟು ಹಿಡಿದವರನ್ನು ಕೋಮುವಾದಿಗಳು, ಮೂಲಭೂತವಾದಿಗಳು, ಚೆಡ್ಡಿಗಳು, ಸಂಪ್ರದಾಯವಾದಿಗಳು ಎಂದು ಜರೆದರಲ್ಲ, ಅದಕ್ಕಾಗಿ ವ್ಯಥೆಯಾಗುತ್ತದೆ. ಹಿಂದುಗಳಾಗಿಯೂ ಪ್ರಗತಿಪರರು, ಬುದ್ಧಿಜೀವಿಗಳು ಎಂದು ಕರೆಯಿಸಿಕೊಂಡವರು ಗಂಡುಸೂಳೆಗಳಂತೆ ವರ್ತಿಸಿದ ರೀತಿ ನೋಡಿ ವಿಷಾದವಾಗುತ್ತದೆ. 

ನೆಹರು ಅವರಿಂದ ಐ.ಕೆ.ಗುಜ್ರಾಲ್ ಅವರ ತನಕ ಪ್ರಧಾನಿಗಳಾಗಿದ್ದವರು, ರಾಮ ಮಂದಿರ ವಿವಾದದ ಬಗ್ಗೆ ವರ್ತಿಸಿದ ರೀತಿ ಬಗ್ಗೆ ನೋಡಿದರೆ ಆಕ್ರೋಶ ಉಕ್ಕಿ ಬರುತ್ತದೆ.  1951 ರಿಂದ  1986 ರವರೆಗೆ ರಾಮಜನ್ಮಭೂಮಿ ಸಂಕೀರ್ಣದ ಗೇಟಿಗೆ ಬೀಗ ಜಡಿದಿಡಲಾಗಿತ್ತು. ಆಗ ಕೇಂದ್ರದಲ್ಲಿ ಮತ್ತು ಉತ್ತರ ಪ್ರದೇಶ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿತ್ತು. ರಾಮ ಮಂದಿರ ನಿರ್ಮಾಣ ಕೋರ್ಟ್ ಮೆಟ್ಟಿಲೇರುವಂತೆ ಮಾಡಿ, ಅದು ಯಾವತ್ತೂ ಇತ್ಯರ್ಥವಾಗಬಾರದು ಎಂಬ ಧೋರಣೆಯನ್ನು ಕಾಂಗ್ರೆಸ್ ನೆಹರು ಕಾಲದಿಂದಲೂ ಅನುಸರಿಸಿಕೊಂಡು ಬಂದಿತು ಎನ್ನುವುದು ಸರ್ವ ವೇದ್ಯ. ಇಲ್ಲವಾದರೆ, ಈ ಸಮಸ್ಯೆಯನ್ನು ಬಗೆಹರಿಸುವುದು ನೆಹರು ಅವರಿಗೆ ಯಾವ ದೊಡ್ಡ ಕಾರ್ಯವೂ ಆಗಿರಲಿಲ್ಲ. ಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟರೆ, ಮುಸ್ಲಿಮರ ಕೋಪಕ್ಕೆ ಗುರಿಯಾಗಬೇಕಾಗಬಹುದು ಎಂಬ ಕಾರಣಕ್ಕೆ ಕಾಂಗ್ರೆಸ್ಸಿಗರು ರಾಮ ಜನ್ಮ ಭೂಮಿಗೆ ಬೀಗ ಜಡಿಸಿದರು. ಒಬ್ಬ ಪುರೋಹಿತ ಮಾತ್ರ ಹೋಗಿ ಪೂಜೆ ಮಾಡಿ ಬರುತ್ತಿದ್ದ. ಭಕ್ತರೆಲ್ಲ ಗೇಟಿನ ಹೊರಗಡೆ ನಿಂತು ದೂರದಿಂದ ಕೈ ಮುಗಿದು ಬರಬೇಕಿತ್ತು. ಎಂಥ ಅವಸ್ಥೆ ಸ್ವಾಮೀ ಇದು ?! 

ಭಾರತದಾದ್ಯಂತ ಶ್ರೀರಾಮನಿಗೆ ಮಂದಿರ ಇದ್ದರೂ, ಕೋಟಿ ಕೋಟಿ ಮನ-ಮನೆಗಳಲ್ಲಿ ಶ್ರೀರಾಮ ನೆಲೆಸಿದ್ದರೂ, ಆತ ಹುಟ್ಟಿದ ಅಯೋಧ್ಯೆಯಲ್ಲಿ ಮಾತ್ರ ಆತನಿಗೆ ಸಾರ್ವಜನಿಕ ಪೂಜೆಗೂ ಅವಕಾಶ ಕೊಡಲಿಲ್ಲ, ಆತನಿಗೆ ಒಂದು ಮಂದಿರ ಕಟ್ಟಲೂ ಬಿಡಲಿಲ್ಲ. ಹೇಯ ರಾಜಕಾರಣಕ್ಕೂ ಒಂದು ಮಿತಿ ಇಲ್ಲವಾ ? ಮುಸ್ಲಿಂ ಓಲೈಕೆಗೂ ಒಂದು ಮಿತಿ ಬೇಡವಾ ? ಹೀಗಾಗಿ ಮಂದಿರ ಪರ ಮಾತಾಡುವವರನ್ನು ಕೋಮುವಾದಿಗಳೆಂದೂ, ಮಸೀದಿ ಪರ ಇರುವವರನ್ನು ಜಾತ್ಯತೀತರೆಂದೂ, ಪ್ರಗತಿಪರರೆಂದೂ ಲೇಬಲ್ ಹಚ್ಚುವ ಕೆಲಸ ನಿರಾತಂಕವಾಗಿ ನಡೆದುಕೊಂಡು ಬಂದಿತು. 

ದೇವೇಗೌಡರಂಥ ರಾಜಕಾರಣಿಗಳಿಗೆ ಮನೆಯಲ್ಲಿ ಪೂಜೆ ಮಾಡಲು ಶ್ರೀರಾಮ ಬೇಕು. ಆದರೆ ವೋಟಿಗಾಗಿ ಜಾತ್ಯತೀತತೆಯ ಮುಖವಾಡ ಬೇಕು. ಮಂದಿರ ಪರವಾಗಿ ಮಾತಾಡಿದರೆ, ಮುಸ್ಲಿಂ ಮತಗಳು ಕೈತಪ್ಪಬಹುದು ಎಂಬ ಆತಂಕ. ಬಿಜೆಪಿ ಹೊರತಾಗಿ, ಎಲ್ಲಾ ರಾಜಕೀಯ ಪಕ್ಷಗಳೂ ಇದನ್ನೇ ಮಾಡಿದವು. ಮಂದಿರ ಸಮಸ್ಯೆ ಬಗೆಹರಿದರೆ ಬಿಜೆಪಿಗೆ ಲಾಭವಾಗಬಹುದು ಎಂಬ ಲೆಕ್ಕಾಚಾರದಿಂದ, ಈ ಸಮಸ್ಯೆಗೆ ಪರಿಹಾರ ಕಾಣಿಸದೇ ನನೆಗುದಿಗೆ ಬಿಟ್ಟಿದ್ದರು. ನಮ್ಮ ನ್ಯಾಯದಾನ ವ್ಯವಸ್ಥೆಯ ಲೋಪ-ದೋಷಗಳನ್ನು ಬಳಸಿಕೊಂಡು, ಈ ವಿವಾದವನ್ನು ಇಷ್ಟು ವರ್ಷಗಳವರೆಗೆ ಎಳೆಯುತ್ತಾ ಬಂದಿದ್ದು ದೌರ್ಭಾಗ್ಯ. 

ಆದರೆ ಈ ಸಂದರ್ಭದಲ್ಲಿ ನಾವು ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿಯವರನ್ನು ನೆನೆಯಬೇಕು. ಅವರು ರಾಮಜನ್ಮಭೂಮಿ ಹೋರಾಟಕ್ಕೆ ರಾಷ್ಟ್ರೀಯ ಸ್ವರೂಪ ಕೊಟ್ಟು, ಇದನ್ನು ಒಂದು ಜನಾಂದೋಲನವನ್ನಾಗಿ ಮಾಡದಿದ್ದರೆ, ಪ್ರತಿ ಹಿಂದೂ ಮತ್ತು ಭಾರತೀಯನ ಅಸ್ಮಿತೆಯ ಪ್ರಶ್ನೆಯನ್ನಾಗಿ ಕೆಣಕದಿದ್ದರೆ, ಈ ಜನ್ಮದಲ್ಲಿ ಈ ವಿವಾದ ಬಗೆಹರಿಯುತ್ತಿರಲಿಲ್ಲ. ಇದರಿಂದ ಬಿಜೆಪಿಗೆ ರಾಜಕೀಯ ಲಾಭವಾಯಿತು ಎಂಬುದು ಬೇರೆ ಮಾತು. ಅದಕ್ಕಿಂತ ಮುಖ್ಯವಾಗಿ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಈ ವಿವಾದ ತೀವ್ರ ಪೆಟ್ಟುಕೊಟ್ಟಿತು ಎನ್ನುವುದು ಮಾತ್ರ ಸತ್ಯ. ಭಾರತದಲ್ಲಿ ಹಿಂದೂ ಭಾವನೆಗೆ ಅಪಮಾನ ಮಾಡಿದ ಪ್ರತೀಕವೇ ಶ್ರೀರಾಮ ಜನ್ಮಭೂಮಿ ಹೋರಾಟ. ಹಾಗಂತ ಇದು ಮುಸ್ಲಿಂ ಧರ್ಮಿಯರ ವಿರುದ್ಧದ ಹೋರಾಟವಲ್ಲ. ಇದು ಬಹುಸಂಖ್ಯಾತ ಜನರ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳಿಗೆ ಆಘಾತ ತಂದ ಹುನ್ನಾರದ ವಿರುದ್ಧ ನಡೆಸಿದ ಸ್ವಾಭಿಮಾನಿ ಭಾರತೀಯನ ಹೋರಾಟವಾಗಿತ್ತು ಎಂಬುದನ್ನು ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. 

ಈಗ ಕಾಂಗ್ರೆಸ್ ನಾಯಕರು ಪರಿತಪಿಸುತ್ತಿದ್ದಾರೆ. ಅವರಿಗೆ ತಮ್ಮ ತಪ್ಪಿನ ಅರಿವಾಗುತ್ತಿದೆ. ರಾಮ ಮಂದಿರ ಶಂಕುಸ್ಥಾಪನೆಗೆ ತಮಗೆ ಆಮಂತ್ರಣ ನೀಡಿಲ್ಲ ಎಂದು ಹೇಳುತ್ತಿದ್ದಾರೆ. ಇದು ಬಿಜೆಪಿ ಕಾರ್ಯಕ್ರಮ ಅಲ್ಲ ಎಂದು ಹಲುಬುತ್ತಿದ್ದಾರೆ. ಇವರಿಗೆ ಮಾನ-ಮರ್ಯಾದೆ ಇದ್ದಿದ್ದರೆ ಈ ರೀತಿ ಮಾತಾಡುತ್ತಿರಲಿಲ್ಲ. ಶ್ರೀರಾಮ ಎಂಬುದು ಕಾಲ್ಪನಿಕ ವ್ಯಕ್ತಿ, ರಾಮಾಯಣ ಎಂಬುದು  ಕಟ್ಟುಕತೆ ಎಂದು ಕೋರ್ಟಿನಲ್ಲಿ ವಾದಿಸಿದವರು ಇದೇ ಕಾಂಗ್ರೆಸ್ ನಾಯಕ, ಮಾಜಿ ಮಂತ್ರಿ ಮತ್ತು ನ್ಯಾಯವಾದಿ ಕಪಿಲ್ ಸಿಬಲ್. ಸೋನಿಯಾ ಗಾಂಧಿ ಅಥವಾ ಮನಮೋಹನ ಸಿಂಗ್ ಇದ್ದಿದ್ದರೆ ಶ್ರೀರಾಮ ಮಂದಿರ ಸಾಧ್ಯವಿತ್ತಾ ? ಇನ್ನು ನೂರು ವರ್ಷವಾದರೂ ಈ ಸಮಸ್ಯೆ ಬಗೆಹರಿಯಲು ಕಾಂಗ್ರೆಸ್ ನಾಯಕರು ಬಿಡುತ್ತಿರಲಿಲ್ಲ. ಈಗ ಈ ನಾಯಕರು ತಮಗೆ ಆಮಂತ್ರಣ ಇಲ್ಲ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಅಲ್ಲೇನಾದರೂ ಇಫ್ತಾರ ಕೂಟ ನಡೆದಿದ್ದರೆ ಇದೇ ನಾಯಕರು ಮಂಡೆ ಟೋಪಿ ಹಾಕ್ಕೊಂಡು ಓಡಿ ಹೋಗುತ್ತಿದ್ದರು. ಈಗ ಮುಖ ಮುಚ್ಚಿಕೊಂಡು ಹೋಗಲೂ ಆಗುತ್ತಿಲ್ಲ. ಶ್ರೀರಾಮನಿಗೆ ಮಂದಿರ ಕಟ್ಟಲು ಬಿಡದ ರಾಜಕೀಯ ನಾಯಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು.  ಈಗಲಾದರೂ ಅವರಿಗೆ ತಮ್ಮ ತಪ್ಪಿನ ಅರಿವಾದರೆ ಸಾಕು. 

ಮೋದಿ ಅವರು ಪ್ರಧಾನಿ ಆಗಿರದಿದ್ದರೆ ಈ ಸಮಸ್ಯೆ ಇತ್ಯರ್ಥ ಕಾಣುತ್ತಿರಲಿಲ್ಲ ಎನ್ನುವುದು ಸಹ ಅಷ್ಟೇ ಸತ್ಯ. ಇದಲ್ಲದೇ ಈ ಹೋರಾಟದಲ್ಲಿ ಅಸಂಖ್ಯ ಜನರ ಪಾತ್ರವಿದೆ, ಭಾಗೀದಾರಿಕೆಯಿದೆ. ಇಡೀ ದೇಶದ ಪ್ರಾರ್ಥನೆಯಿದೆ. ಇವೆಲ್ಲವುಗಳಿಗೆ ಮೂರ್ತರೂಪವಾಗಿ ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಶಂಕುಸ್ಥಾಪನೆಯಾಗಲಿದೆ.ಭಾರತದ ಸ್ವಾಭಿಮಾನ ಅರಳಿದೆ. ದೇಶ ಹೊಸ ಶಕೆಗೆ ಮುಖ ಮಾಡಿದೆ. ಈ ಕ್ಷಣದಲ್ಲಿ ಅಂದು ಅನುಭವಿಸಿದ ಅಪಮಾನದ ದಳ್ಳುರಿಯನ್ನು ನೆನೆಯದಿದ್ದರೆ, ಇಂದಿನ ಸಾರ್ಥಕ್ಯದ ಕ್ಷಣದ ತೀವ್ರತೆ ಅರ್ಥವಾಗುವುದಿಲ್ಲ. 

ಜೈ ಶ್ರೀರಾಮ !!

ಕೃಪೆ: ಜಯವೀರ ವಿಕ್ರಮ ಸಂಪತ್ ಗೌಡ, ವಿಶ್ವವಾಣಿ

( from VB FB )

Recent Posts

ರಾಜಕೀಯ

ಹರಿಯಾಣದಲ್ಲಿ BJPಗೆ ಹ್ಯಾಟ್ರಿಕ್ ಗೆಲುವು; ಕಾಂಗ್ರೆಸ್‌ಗೆ ನಿರಾಸೆ

ಹರಿಯಾಣದಲ್ಲಿ BJPಗೆ ಹ್ಯಾಟ್ರಿಕ್ ಗೆಲುವು; ಕಾಂಗ್ರೆಸ್‌ಗೆ ನಿರಾಸೆ

ಚಂಡೀಗಢ: ಹರಿಯಾಣ (haryana) ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಮಹತ್ವದ ಘಟಕ್ಕೆ ಬಂದಿದ್ದು, ಆಡಳಿತರೂಢ ಬಿಜೆಪಿ ಮತ್ತೆ ಅಧಿಕಾರಕ್ಕೇರುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ. ಇದೀಗ ಬಂದ ಚುನಾವಣೆ ಆಯೋಗದ ವರದಿ ಅನ್ವಯ

[ccc_my_favorite_select_button post_id="93692"]
ಕಿತ್ತೂರು ರಾಣಿ ಚೆನ್ನಮ್ಮ ವಿಜಯ ಜ್ಯೋತಿ ರಥಕ್ಕೆ ದೊಡ್ಡಬಳ್ಳಾಪುರದಲ್ಲಿ ಅದ್ಧೂರಿ ಸ್ವಾಗತ..!

ಕಿತ್ತೂರು ರಾಣಿ ಚೆನ್ನಮ್ಮ ವಿಜಯ ಜ್ಯೋತಿ ರಥಕ್ಕೆ ದೊಡ್ಡಬಳ್ಳಾಪುರದಲ್ಲಿ ಅದ್ಧೂರಿ ಸ್ವಾಗತ..!

ದೊಡ್ಡಬಳ್ಳಾಪುರ: ಕಿತ್ತೂರು ರಾಣಿ ಚೆನ್ನಮ್ಮ ವಿಜಯ ಜ್ಯೋತಿ ರಥ ದೊಡ್ಡಬಳ್ಳಾಪುರ ನಗರಕ್ಕೆ ಆಗಮಿಸಿತು. ನಗರದ ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯಿತಿ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯ ಜ್ಯೋತಿ ರಥವನ್ನು ಕಲಾತಂಡಗಳೊಂದಿಗೆ ಸ್ವಾಗತಿಸಲಾಯಿತು. ದೊಡ್ಡಬಳ್ಳಾಪುರಕ್ಕೆ ಆಗಮಿಸಿದ ಕಿತ್ತೂರು

[ccc_my_favorite_select_button post_id="93698"]
ಶಬರಿಮಲೆ ಯಾತ್ರೆಗೆ ಇನ್ನು ಆನ್‌ಲೈನ್‌ ಬುಕ್ಕಿಂಗ್ ಕಡ್ಡಾಯ!: ಪಾರ್ಕಿಂಗ್ ಹೆಚ್ಚಳ, ರಸ್ತೆ ದುರಸ್ತಿ ಕೇರಳ ಸರ್ಕಾರ ಕ್ರಮ

ಶಬರಿಮಲೆ ಯಾತ್ರೆಗೆ ಇನ್ನು ಆನ್‌ಲೈನ್‌ ಬುಕ್ಕಿಂಗ್ ಕಡ್ಡಾಯ!: ಪಾರ್ಕಿಂಗ್ ಹೆಚ್ಚಳ, ರಸ್ತೆ ದುರಸ್ತಿ

ತಿರುವನಂತಪುರ: ಪ್ರಸಿದ್ದ ಧಾರ್ಮಿಕ ಕ್ಷೇತ್ರ ಶಬರಿಮಲೆ (Shabarimale) ದೇಗುಲದ ವಾರ್ಷಿಕ ಮಂಡಲಂ- ಮಕರವಿಳಕ್ಕು ಯಾತ್ರೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಈ ವರ್ಷ ಆನ್‌ಲೈನ್‌ನಲ್ಲಿ ಬುಕ್ ಮಾಡಿದವರಿಗೆ ಮಾತ್ರ ಶಬರಿಮಲೆಗೆ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ.

[ccc_my_favorite_select_button post_id="93522"]
ರೊವಾಂಡಾ ದೇಶದಲ್ಲಿ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ: ಸ್ಥಳೀಯ ಉದ್ಯಮಿಗಳಿಗೆ ಆಹ್ವಾನ| ಇಂಡಿಯನ್ ಕ್ರೀಡಾ ಶಾಲೆ ಸ್ಥಾಪನೆ: ಸಚಿವ ಸತೀಶ್ ಜಾರಕಿಹೊಳಿ

ರೊವಾಂಡಾ ದೇಶದಲ್ಲಿ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ: ಸ್ಥಳೀಯ ಉದ್ಯಮಿಗಳಿಗೆ ಆಹ್ವಾನ| ಇಂಡಿಯನ್

ಬೆಳಗಾವಿ, (ಸೆ.9): ರೊವಾಂಡಾ ದೇಶದಲ್ಲಿ ಕೃಷಿ, ಆರೋಗ್ಯ, ಶಿಕ್ಷಣ, ಗಣಿಗಾರಿಕೆ, ಇಂಧನ ಹಾಗೂ ಮೂಲಸೌಕರ್ಯಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ವಿಫುಲ ಅವಕಾಶಗಳಿವೆ. ಕೈಗಾರಿಕೋದ್ಯಮಿಗಳು ಮತ್ತು ಬಂಡವಾಳ ಹೂಡಿಕೆದಾರರಿಗೆ ಅನುಕೂಲವಾಗುವಂತಹ ಉದ್ಯಮಸ್ನೇಹಿ ವಾತಾವರಣ ಹೊಂದಿದ್ದು, ಇಲ್ಲಿನ ಹೂಡಿಕೆದಾರರಿಗೆ ಮುಕ್ತ ಸ್ವಾಗತವಿದೆ ಎಂದು ಪೂರ್ವ

[ccc_my_favorite_select_button post_id="89581"]

ಕ್ರೀಡೆ

ರಾಜ್ಯ ಮಟ್ಟದ Dasara ಕ್ರೀಡಾಕೂಟ: ದೊಡ್ಡಬಳ್ಳಾಪುರದ ಕ್ರೀಡಾಪಟುಗಳು ಸಾಧನೆ

ರಾಜ್ಯ ಮಟ್ಟದ Dasara ಕ್ರೀಡಾಕೂಟ: ದೊಡ್ಡಬಳ್ಳಾಪುರದ ಕ್ರೀಡಾಪಟುಗಳು ಸಾಧನೆ

ದೊಡ್ಡಬಳ್ಳಾಪುರ: ಮೈಸೂರಿನ ಅರಮನೆ ಮೈದಾನದಲ್ಲಿ ದಸರಾ (Dasara) ಉತ್ಸವ ಅಂಗವಾಗಿ ಅಕ್ಟೋಬರ್ 03 ರಿಂದ ಅಕ್ಟೋಬರ್ 06 ರ ವರೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ‘ರಾಜ್ಯ ಮಟ್ಟದ ದಸರಾ

[ccc_my_favorite_select_button post_id="93666"]
crime: ಪ್ರಿಯಕರನೊಂದಿಗೆ ಮದುವೆಗೆ ಅಡ್ಡಿ: ಕುಟುಂಬದ 13 ಜನರ ಕೊಂದ ಬಾಲಕಿ.!

crime: ಪ್ರಿಯಕರನೊಂದಿಗೆ ಮದುವೆಗೆ ಅಡ್ಡಿ: ಕುಟುಂಬದ 13 ಜನರ ಕೊಂದ ಬಾಲಕಿ.!

ಸಿಂಧ್: ತಾನು ಪ್ರೀತಿಸಿದ ಯುವಕನ ಜೊತೆ ಮದುವೆಯಾಗಲುಮನೆಯವರು ವಿರೋಧಿಸಿದ ಕಾರಣಕ್ಕೆ, ಬಾಲಕಿಯೊಬ್ಬಳು ಕುಟುಂಬದ 13 ಜನರಿಗೆ ಊಟದಲ್ಲಿ ವಿಷ ಹಾಕಿ ಕೊಂದ (crime) ಘಟನೆ ಪಾಕಿಸ್ತಾನದಲ್ಲಿ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ. ಖೈರಪುರ ಸಮೀಪದ ಹೈಬತ್ ಖಾನ್ ಬ್ರೋಹಿ ಗ್ರಾಮದಲ್ಲಿ ಆಗಸ್ಟ್ 19 ರಂದು

[ccc_my_favorite_select_button post_id="93664"]
Accident: ಜನಪದ ಕಲಾವಿದ ಗುರುರಾಜ ಹೊಸಕೋಟೆ ಕಾರು ಅಪಘಾತ..

Accident: ಜನಪದ ಕಲಾವಿದ ಗುರುರಾಜ ಹೊಸಕೋಟೆ ಕಾರು ಅಪಘಾತ..

ಬಾಗಲಕೋಟೆ: ಜನಪದ ಕಲಾವಿದ, ಚಿತ್ರನಟ ಗುರುರಾಜ ಹೊಸಕೋಟೆ ಅವರ ಕಾರು ಅಪಘಾತಕ್ಕೀಡಾಗಿರುವ (Accident) ಘಟನೆ ಮುಧೋಳ ತಾಲೂಕಿನ ಸೋರಗಾವಿ ಬಳಿ ನಡೆದಿದೆ. ಎದುರಿಗೆ ಬರುತ್ತಿದ್ದ ವಾಹನವನ್ನು ತಪ್ಪಿಸಲು ಹೋದ ಪರಿಣಾಮ ಕಾರು ರಸ್ತೆ ಬದಿಯಲ್ಲಿದ್ದ

[ccc_my_favorite_select_button post_id="93591"]

ಆರೋಗ್ಯ

ಸಿನಿಮಾ

NATIONAL AWARDS : ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ ರಿಷಭ್ ಶೆಟ್ಟಿ- Video

NATIONAL AWARDS : ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ ರಿಷಭ್ ಶೆಟ್ಟಿ- Video

ನವದೆಹಲಿ; ಪ್ರಕಟವಾಗಿದ್ದ 2022ನೇ ಸಾಲಿನ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು (NATIONAL AWARDS) ಇಂದು ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಈ ಪೈಕಿ ಕನ್ನಡದ ಚಲನಚಿತ್ರಗಳು 6 ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಕನ್ನಡದ ಕೆಜಿಎಫ್ ಚಾಪ್ಟರ್ 2

[ccc_my_favorite_select_button post_id="93703"]
error: Content is protected !!