ಬೆಂಗಳೂರು: ಆಗಸ್ಟ್ 6ರಂದು ಎಸ್ ಎಸ್ ಎಲ್ ಸಿ ಫಲಿತಾಂಶ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ.
ಆದರೆ ನಾಳೆ SSLC ಫಲಿತಾಂಶ ಪ್ರಕಟ ಎಂಬ ಸುದ್ಧಿ ಸತ್ಯವಲ್ಲ. ಇನ್ನೂ ದಿನಾಂಕ ನಿಶ್ಚಯವಾಗಿಲ್ಲ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ಅವರು ಎಸ್ಎಸ್ಎಲ್ಸಿ ಫಲಿತಾಂಶದ ದಿನಾಂಕ ನಿಶ್ಚಯವಾಗಿಲ್ಲ,ನಾಳೆ SSLC ಫಲಿತಾಂಶ ಪ್ರಕಟ ಎಂಬ ಸುದ್ಧಿ ಸತ್ಯವಲ್ಲ ಎಂದಿದ್ದಾರೆ.