ದೊಡ್ಡಬಳ್ಳಾಪುರ: ನಗರದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ 90ರ ದಶಕದಲ್ಲಿ ಆರಂಭವಾದ ದಿನಗಳಿಂದಲು ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಸಾವಿರಾರು ಜನ ವಿದ್ಯಾರ್ಥಿಗಳ ಮಾರ್ಗದರ್ಶಕರಾಗಿದ್ದ ಆಸ್ಗರಿಬೇಗಂ(62) ಶನಿವಾರ ನಿಧನ ಹೊಂದಿದ್ದಾರೆ.
ಅವಿವಾಹಿತರಾಗಿದ್ದ ಅವರು ತಮ್ಮ ಇಡೀ ಬದುಕನ್ನು ವಿದ್ಯಾರ್ಥಿಗಳ ಯಶಸ್ಸಿಗೆ ಮುಡುಪಾಗಿಟ್ಟಿದ್ದರು.
ನಗರದ ಖಾಸಗಿ ಶಾಲೆಗಳ ಪೈಕಿ ಆಸ್ಗರಿಬೇಗಂ ಹೆಚ್ಚು ಜನಪ್ರಿಯ ಮುಖ್ಯಶಿಕ್ಷಕಿಯಾಗಿದ್ದರು.
ಆಸ್ಗರಿಬೇಗಂ ಅವರ ನಿಧನಕ್ಕೆ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು,ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.