ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಶನಿವಾರ ಆರು ಮಂದಿಯಲ್ಲಿ ಕರೊನಾ ಸೋಂಕು ದೃಡಪಟ್ಟಿದೆ.ಆದರೆ, ಒಂದೇ ದಿನ ವಿಭಿನ್ನ ಆಸ್ಪತ್ರೆಯಲ್ಲಿ ಮಾಡಲಾದ ಕರೊನಾ ತಪಾಸಣೆ ವರದಿಯಲ್ಲಿ ಎರಡು ತರವಾದ ಮಾಹಿತಿ ಬಂದಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನ ಉಂಟುಮಾಡಿದೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ.ಶನಿವಾರದ ಸಂಜೆಯ ವರಗೆ ದೊಡ್ಡಬಳ್ಳಾಪುರ ತಾಲ್ಲೂಕಿನ 4 ಮಂದಿ ಗಂಡು ಹಾಗೂ ಇಬ್ಬರು ಮಹಿಳೆಯರು ಸೇರಿ ಆರು ಜನರಿಗೆ ಕರೊನಾ ಸೋಂಕು ದೃಡಪಟ್ಟಿದೆ.
ಹರಿತಲೇಖನಿಗೆ ದೊರಕಿರುವ ವರದಿಯನ್ವಯ ಮಲ್ಲೋಹಳ್ಳಿಯಲ್ಲಿ ಇಬ್ಬರು ಸೇರಿದಂತೆ,ತಿರುಮಗೊಂಡನಹಳ್ಳಿ, ಇಸ್ತೂರು ಕಾಲೋನಿ, ಕಾಡನೂರು, ಹೊನ್ನಾವರದಲ್ಲಿ ತಲಾ ಒಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 622 ಮಂದಿ ಸೋಂಕು ತಗುಲಿದ್ದು,281 ಮಂದಿ ಗುಣಮುಖರಾಗಿದ್ದರೆ 17 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 34 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 290 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ಕರೊನಾ ಸೋಂಕಿನ ವರದಿ ಯಡವಟ್ಟು / ಎರಡು ಆಸ್ಪತ್ರೆಗಳಲ್ಲಿ ಭಿನ್ನ ವರದಿ
ವ್ಯಕ್ತಿಯೋರ್ವರಿಗೆ ಕರೊನಾ ಸೋಂಕು ದೃಢಪಟ್ಟಿದೆ ಎಂದು ಗ್ರಾಮವನ್ನು ಸೀಲ್ ಡೌನ್ ಮಾಡಲು ಬಂದ ಕರೊನಾ ವಾರಿಯರ್ಸ್‌ಗಳ ವಿರುದ್ದ ಗ್ರಾಮಸ್ಥರು ಹರಿಹಾಯ್ದಿರುವ ಘಟನೆ ತಾಲೂಕಿನ ತಿರುಮಗೊಂಡನಹಳ್ಳಿಯಲ್ಲಿ ನಡೆದಿದೆ.
ಘಟನೆ ವಿವರ
ಸ್ಥಳೀಯ ಕರೊನಾ ವಾರಿಯರ್ಸ್ ಹರಿತಲೇಖನಿಗೆ ನೀಡಿರುವ ಮಾಹಿತಿ ಅನ್ವಯ.ತಿರುಮಗೊಂಡನಹಳ್ಳಿಯ ವ್ಯಕ್ತಿಯೋರ್ವರು ಅಪಘಾತಕ್ಕೆ ಒಳಗಾಗಿ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ.ಚಿಕಿತ್ಸೆಗೂ ಮುನ್ನ ನಡೆಸಲಾದ ಪರೀಕ್ಷೆಯ ವರದಿಯಲ್ಲಿ ಕರೊನಾ ಸೋಂಕು ದೃಡಪಟ್ಟಿದೆ ಎಂದು ಆ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದರೆ,ಅದೇ ದಿನ ಮತ್ತೊಂದು ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದಾಗ ನಡೆಸಲಾದ ಪರೀಕ್ಷೆಯಲ್ಲಿ ವರದಿಯ ಕರೊನಾ ಇಲ್ಲವೆಂದು ವರದಿ ಬಂದಿದ್ದು ಚಿಕಿತ್ಸೆ ನೀಡಿದ್ದಾರೆ.
ಆದರೆ ತಾಲೂಕು ಆಡಳಿತದ ವರದಿಯಲ್ಲಿ ಆ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ ಎಂಬ ಕಾರಣಕ್ಕೆ,ಗ್ರಾಮವನ್ನು ಸೀಲ್ಡೌನ್ ಮಾಡಲು ತೆರಳಿದಾಗ ಸ್ಥಳಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು,ವಾಸ್ತವ ವರದಿ ನೀಡದೆ ಕರೊನಾ ಸೋಂಕಿನ ವಿಚಾರದಲ್ಲಿ ಅನುಮಾನ ಮೂಡುತ್ತಿದೆ ಎಂದು ಹರಿಹಾಯ್ದಿದ್ದಾರೆ.