ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ: ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಕೆ

ಬೆಂಗಳೂರು:  ರಸಗೊಬ್ಬರ ಚಿಲ್ಲರೆ ಮತ್ತು ಸಗಟು ಮಾರಾಟಗಾರರು ಯಾವುದೇ ಕಾರಣಕ್ಕೂ ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸಿದ್ದಲ್ಲಿ ಅಥವಾ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗವುದು ಎಂದು ಕೃಷಿ ಸಚಿ ಬಿ.ಸಿ.ಪಾಟೀಲ್ ಎಚ್ಚರಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಲಾಖೆಯ ನಿಯಮಾನುಸಾರವೇ ರಸಗೊಬ್ಬರವನ್ನು ರೈತರಿಗೆ ವಿತರಿಸಬೇಕು. ರೈತಬಾಂಧವರಿಗೆ ಯಾವುದೇ ಕಾರಣಕ್ಕೂ ರಸಗೊಬ್ಬರದ ಕೊರತೆಯಾಗದಂತೆ ಇಲಾಖೆ ಸೂಕ್ತ ಕ್ರಮಕೈಗೊಂಡಿದೆ. ರಸಗೊಬ್ಬರಕ್ಕೆ ಯಾವುದೇ ಕೊರತೆಯಿರುವುದಿಲ್ಲ. ಅಗತ್ಯಕ್ಕನುಗುಣವಾಗಿ ರಸಗೊಬ್ಬರ ಸರಬರಾಜಿಗೆ ಕ್ರಮಕೈಗೊಳ್ಳಲಾಗಿದ್ದು , ರೈತ ಬಾಂಧವರು ಯಾವುದೇ ಇಲ್ಲಸಲ್ಲದ ವದಂತಿಗಾಗಲೀ ಸುಳ್ಳು ಸುದ್ದಿಗಾಗಲೀ ಗಮನ ನೀಡದೇ ತಾಳ್ಮೆ ವಹಿಸಿ ರೈತಬಾಂಧವರು ಸಾಮಾಜಿಕ ಅಂತರ ಕಾಯ್ದುಕೊಂಡು ರಸಗೊಬ್ಬರ ಖರೀದಿಸುವಂತೆ ಸಚಿವರು ಮನವಿ ಮಾಡಿದ್ದಾರೆ.

ಕೆಲವೆಡೆ ಕೆಲ ಚಿಲ್ಲರೆ ಮತ್ತು ಸಗಟು ಮಾರಾಟಗಾರರು ಕೃತಕ ಅಭಾವ ಸೃಷ್ಟಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ಅಂತಹವರನ್ನು ಗುರುತಿಸಿ ಆರೋಪ ಸಾಬೀತಾದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದೆಂದು ಬಿ.ಸಿ.ಪಾಟೀಲರು ಮತ್ತೊಮ್ಮೆ ಎಚ್ಚರಿಸಿದ್ದಾರೆ.

ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಇದೂವರೆಗೂ 57.12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 8.51 ಲಕ್ಷ ಹೆಕ್ಟೇರ್ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈ ಬಾರಿ ಕಳೆದ 5 ವರ್ಷಗಳ ಸರಾಸರಿ ಬಿತ್ತನೆಯ ಶೇ.14 ರಷ್ಟು ಹೆಚ್ಚಿನ ಬಿತ್ತನೆಯಾಗಿದೆ.  ಈ ಬಾರಿ ಹೆಚ್ಚಿನ ಬಿತ್ತನೆಯಾಗಿರುವುದರಿಂದ ಹೆಚ್ಚಿನ ಕೃಷಿ ಪರಿಕರಗಳ ಅವಶ್ಯಕತೆಯಿರುತ್ತದೆ. ಕೇಂದ್ರ ಸರ್ಕಾರದ ಹಂಚಿಕೆಯಂತೆ ರಸಗೊಬ್ಬರಗಳನ್ನು ಜಿಲ್ಲೆಗಳಿಗೆ ಸರಬರಾಜು ಮಾಡಲಾಗುತ್ತಿದ್ದು, ಕಳೆದೆರಡು ವರ್ಷಗಳಿಗೆ ಹೋಲಿಸಿದಲ್ಲಿ ಈ ಬಾರಿ ಹೆಚ್ಚಿನದಾಗಿ ರಸಗೊಬ್ಬರ ಸರಬರಾಜಾಗಿರುತ್ತದೆ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದೆ.

ಜುಲೈ ತಿಂಗಳಿನಲ್ಲಿ ಮಂಗಳೂರು ಬಂದರಿಗೆ ಆಗಮಿಸಬೇಕಿದ್ದ ಹಡಗು ಸಕಾಲಕ್ಕೆ ಬಾರದಿರುವುದರಿಂದ ಯೂರಿಯಾ ರಸಗೊಬ್ಬರ ಸರಬರಾಜು ಜುಲೈ ತಿಂಗಳಿನಲ್ಲಿ  ವ್ಯತ್ಯಾಸವಾಗಿರುತ್ತದೆ. ಆದರೆ ಆಗಸ್ಟ್ ತಿಂಗಳಿನಲ್ಲಿ ಯೂರಿಯಾ ರಸಗೊಬ್ಬರಕ್ಕೆ ಅಂದಾಜು 1,77,000 ಟನ್ ಬೇಡಿಕೆಯಿದ್ದು, ಈಗಾಗಲೇ 49,749 ಟನ್ ಸರಬರಾಜಾಗಿರುತ್ತದೆ. 19,305 ಟನ್ ಸರಬರಾಜು ಹಂತದಲ್ಲಿದ್ದು, 1,22446 ಮೆಟ್ರಿಕ್ ಟನ್ ಸರಬರಾಜಿಗೆ ಸಿದ್ದತೆ ಮಾಡಲಾಗಿದೆ. ಸರಬರಾಜು ಯೋಜನೆಯಂತೆ ಕೇಂದ್ರ ಸರ್ಕಾರದ ಸಹಕಾರದಿಂದ ಯೂರಿಯಾ ರಸಗೊಬ್ಬರ ಸರಬರಾಜಾಗುವ ನಿರೀಕ್ಷೆಯಿದ್ದು, ಯೂರಿಯಾ ಸರಬರಾಜಿನಲ್ಲಿ ಯಾವುದೇ ತೊಂದರೆಯಾಗುವುದಿಲ್ಲಎಂದು ಕೃಷಿ ಸಚಿವರು ತಿಳಿಸಿದ್ದಾರೆ.

ಕೃಷಿ ಇಲಾಖೆಯ ಅಧಿಕಾರಿಗಳು ರಸಗೊಬ್ಬರಗಳ ಸರಬರಾಜು ಮತ್ತು ರೇಕ್ ಟ್ರ್ಯಾಕಿಂಗ್ ಮೇಲ್ವಿಚಾರಣೆಯನ್ನು ಸಮರ್ಪವಾಗಿ ನಿಭಾಯಿಸುತ್ತಿದ್ದು, 2020 ಜುಲೈ ತಿಂಗಳ ಅಂತ್ಯದವರೆಗೆ 5,63861 ಮೆಟ್ರಿಕ್ ಟನ್ ರಸಗೊಬ್ಬರ ಕೇಂದ್ರ ಸರ್ಕಾರದಿಂದ ಸರಬರಾಜಾಗಿದೆ. ಅಂತೆಯೇ ಡಿಎಪಿ 2,77499 ಮೆ.ಟನ್,ಕಾಂಪ್ಲೆಕ್ಸ್ ರಸಗೊಬ್ಬರ 5,17,144 ಮೆಟ್ರಿಕ್ ಟನ್ ಸರಬರಾಜಾಗಿದೆ ಹಾಗೂ ಎಂಒಪಿ ರಸಗೊಬ್ಬರ ಜುಲೈ ಅಂತ್ಯದವರೆಗೆ 1,31,533 ಮೆಟ್ರಿಕ್ ಟನ್ ಸರಬರಾಜಾಗಿದ್ದು, ಒಟ್ಟಾರೆ 14, 90,970 ಮೆಟ್ರಿಕ್ ಟನ್ ರಸಗೊಬ್ಬರ ಸರಬರಜಾರಾಗಿರುತ್ತದೆ ಎಂದು ಬಿ.ಸಿ.ಪಾಟೀಲರು ಹೇಳಿದ್ದಾರೆ.

ಪ್ರಮುಖವಾಗಿ ರೈತ ಬಾಂಧವರು ಯೂರಿಯಾ ರಸಗೊಬ್ಬರ ಬಳಕೆಯನ್ನು ಅಗತ್ಯಕ್ಕಿಂತ ಹೆಚ್ಚು ಬಳಸಬಾರದು. ಬೇಡಿಕೆಗನುಗುಣವಾಗಿ ಬಳಸಬೇಕು. ಯೂರಿಯಾ ರಸಗೊಬ್ಬರದ ಅತಿ ಬಳಕೆಯಿಂದ ಬೆಳೆಗಳಿಗೆ ಕೀಟ ರೋಗಬಾಧೆಗಳು ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಇಳುವರಿ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿರುವುದಾಗಿ ಕೃಷಿ ಸಚಿವ ರೈತರಲ್ಲಿಮನವಿ ಮಾಡಿದ್ದಾರೆ.

ರಾಜಕೀಯ

ದೊಡ್ಡಬಳ್ಳಾಪುರ TAPMCS ಚುನಾವಣೆ; ಕಣದಲ್ಲಿ ಉಳಿದವರು ಎಷ್ಟು ಗೊತ್ತೆ..!?

ದೊಡ್ಡಬಳ್ಳಾಪುರ TAPMCS ಚುನಾವಣೆ; ಕಣದಲ್ಲಿ ಉಳಿದವರು ಎಷ್ಟು ಗೊತ್ತೆ..!?

ದೊಡ್ಡಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (TAPMCS) ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕೊನೆಯ ದಿನವಾದ ಸೋಮವಾರ ಅಂತಿಮ ಕಣದಲ್ಲಿ ‘ಎ’ ತರಗತಿಯಿಂದ 9, ‘ಬಿ’ ತರಗತಿಯಿಂದ 19 ಜನ ಉಳಿದಿದ್ದಾರೆ.

[ccc_my_favorite_select_button post_id="115412"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ಕಳೆದ ತಿಂಗಳ ಕೊನೆಯ ದಿನ ನಡೆದಿದ್ದ ತಾಲೂಕಿನ ಪ್ರಸಿದ್ಧ ಗುಟ್ಟೆ ಶ್ರೀ ಲಕ್ಷೀನರಸಿಂಹ ಸ್ವಾಮಿ (Gutte Lakshmi Narasimhaswamy Temple) ದೇವಾಲಯದಲ್ಲಿ ಕಳ್ಳತನ (Theft) ಪ್ರಕರಣ ಮತ್ತೆ ಮುಂದುವರಿದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

[ccc_my_favorite_select_button post_id="115220"]
ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರರಿಬ್ಬರ ದುರ್ಮರಣ

ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರರಿಬ್ಬರ ದುರ್ಮರಣ

ಇಂದು ಬೆಳ್ಳಂಬೆಳಗ್ಗೆ ಸಂಭವಿಸಿದ ದ್ವಿಚಕ್ರ ವಾಹನ ಅಪಘಾತದಲ್ಲಿ (Accident) ಗಂಭೀರವಾಗಿ ಗಾಯಗೊಂಡ ಇಬ್ಬರು ಸವಾರರು ಸಾವನ್ನಪ್ಪಿರುವ ತಾಲೂಕಿನ ರಾಮಯ್ಯನಪಾಳ್ಯ ಬಳಿ ನಡೆದಿದೆ.

[ccc_my_favorite_select_button post_id="115419"]

ಆರೋಗ್ಯ

ಸಿನಿಮಾ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯಬೇಕಾದರೆ ನಾಯಕ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಹಾಗೂ ಹೆಚ್ಚು ನಾಯಕ ನಟರು ಚಿತ್ರರಂಗಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="115245"]
error: Content is protected !!