ದೊಡ್ಡಬಳ್ಳಾಪುರ: ವಿದ್ಯುತ್ ಮಗ್ಗದಲ್ಲಿ ಕೂಲಿ ಕೆಲಸ ಮಾಡುವ ನೇಕಾರರಿಗೆ ನೀಡುವ ರೂ2 ಸಾವಿರ ಪರಿಹಾರ ಪಡೆಯಲು ಇದ್ದ ನಿಯಮದಲ್ಲಿ ಸರ್ಕಾರ ಸಡಿಲಿಕೆ ಮಾಡಿ ಆದೇಶ ಹೊರಡಿಸಿ ಎಂದು ಜವಳಿ ಇಲಾಖೆ ಜಿಲ್ಲಾ ಉಪನಿರ್ದೇಶಕ ಗಂಗಯ್ಯ ತಿಳಿಸಿದ್ದಾರೆ.
ಅವರು ಈ ಬಗ್ಗೆ ಮಾಹಿತಿ ನೀಡಿ, ನೇಕಾರಿಕೆಯಲ್ಲಿನ ಕಾರ್ಮಿಕರು ವಿದ್ಯುತ್ ಮಗ್ಗದ ಮಾಲೀಕರಿಂದ ರೂ20ಗಳ ಛಾಪಾ ಕಾಗದದಲ್ಲಿ ಕೂಲಿ ಕಾರ್ಮಿಕ ಎನ್ನುವ ಪ್ರಮಾಣ ಪತ್ರ ಪಡೆಯುವುದನ್ನು ಸರ್ಕಾರ ಪರಿಷ್ಕರಿಸಿದೆ. ಇದಕ್ಕೆ ಬದಲಾಗಿ ಮಗ್ಗದ ಮಾಲೀಕರು ಲೆಟರ್‌ಹೆಡ್ ಅಥವಾ ಬಿಳಿ ಪತ್ರದಲ್ಲಿ ಸಹಿ ಮಾಡಿ ತಮ್ಮಲ್ಲಿ ಕೆಲಸ ಮಾಡುತ್ತಿದ್ದ ಎನ್ನುವುದನ್ನು ಪ್ರಮಾಣಿಕರಿಸಿ ನೀಡಿದರು ಸಾಕಾಗಲಿದೆ. ಇದರಿಂದ ನೇಕಾರಿಕೆಯಲ್ಲಿನ ಕಾರ್ಮಿಕರು ಸರ್ಕಾರದ ಕೋವಿಡ್-19 ಹಿನ್ನೆಲೆಯಲ್ಲಿ ಜಾರಿಗೆ ತರಲಾಗಿದ್ದ ಲಾಕ್‌ಡೌನ್ ಪರಿಹಾರವನ್ನು ಪಡೆಯಲು ಸಹಕಾರಿಯಾಗಲಿದೆ. ಕೂಲಿ ಕಾರ್ಮಿಕ ಪತ್ರಕ್ಕೆ ಸಹಿ ಮಾಡಲು ನಿರಾಕರಿಸುವ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಲ್ಲದೆ ಸರ್ಕಾರದಿಂದ ನೀಡಲಾಗುತ್ತಿರುವ ವಿದ್ಯುತ್ ರಿಯಾಯಿತಿ ರದ್ದುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.