ದೊಡ್ಡಬಳ್ಳಾಪುರ: ಜಿಲ್ಲಾಧಿಕಾರಿಗಳ ಆದೇಶದಂತೆ ನಾಳೆಯ ಕೊನೆಯ ಶ್ರಾವಣ ಶನಿವಾರದಂದು ಕನಸವಾಡಿಯ ಶ್ರೀ ಶನಿ ಮಹಾತ್ಮ ಸ್ವಾಮಿ ದೇವಾಲಯಕ್ಕೆ ಸಾರ್ವನಿಕರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲವೆಂದು ದೇವಾಲಯದ ಧರ್ಮಾಧಿಕಾರಿ ಪ್ರಕಾಶ್ ಹರಿತಲೇಖನಿಗೆ ತಿಳಿಸಿದ್ದಾರೆ.
ಕೋವಿಡ್-19 ಸ್ಪೋಟ ಹಾಗೂ ಹರಡುವುದನ್ನು ತಡೆಗಟ್ಟಲು,ಧಾರ್ಮಿಕ ದತ್ತಿ ರಾಜ್ಯ ಆಯುಕ್ತರ ಆದೇಶದಂತೆ.ಮಧುರೆ ಹೋಬಳಿಯ ಕನಸವಾಡಿ(ಚಿಕ್ಕಮಧುರೆ) ಗ್ರಾಮದಲ್ಲಿನ ಶ್ರೀ ಶನಿ ಮಹಾತ್ಮ ಸ್ವಾಮಿ ದೇವಾಲಯದಲ್ಲಿ ಜು.25ರಿಂದ ಆ.15ರ ವರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದರು.
ಈ ಹಿನ್ನೆಲೆ ನಾಳೆಯ ಕೊನೆಯ ಶ್ರಾವಣ ಶನಿವಾರ ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಇರಲಿದೆ.
ಉಳಿದಂತೆ ಆ.16ರ ಭಾನುವಾರದಿಂದ ಸಾರ್ವಜನಿಕರ ಪ್ರವೇಶಕ್ಕೆ ದೇವಾಲಯದಲ್ಲಿ ಅವಕಾಶ ಇರಲಿದ್ದು,ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.