ದೊಡ್ಡಬಳ್ಳಾಪುರ: ಶಿಕ್ಷಕರನ್ನು ಕೋವಿಡ್-19ರ ಸಮೀಕ್ಷಾ ಕಾರ್ಯಕ್ಕೆ ಬೆಂಗಳೂರು ನಗರಕ್ಕೆ ನಿಯೋಜನೆ ಆದೇಶವನ್ನು ರದ್ದು ಪಡಿಸಲು ಸಹಕರಸಿದರೆಂದು ನಗರದ ಪ್ರವಾಸಿ ಮಂದಿರಲ್ಲಿ ಶಿಕ್ಷಕರ ಸಂಘದಿಂದ ಸನ್ಮಾನಿಸಲಾಯಿತು.
ಈ ವೇಳೆ ಮಾತಾನಾಡಿದ ಕರ್ನಾಟಕ ರಾಜ್ಯ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಕಾಂತರಾಜು,ಕರೊನ ವ್ಯಾಪಕವಾಗಿ ಹರಡುತ್ತಿರುವ ಸಂಧರ್ಭದಲ್ಲಿ ಹಾಗೂ ಗ್ರಾಮಾಂತರ ಜಿಲ್ಲೆಯಿಂದ ಬೆಂಗಳೂರಿಗೆ ತೆರಳಿ ಸಮೀಕ್ಷೆ ಕಾರ್ಯ ನಡೆಸುವುದು ಶಿಕ್ಷಕರಿಗೆ ಕಷ್ಟ ಸಾಧ್ಯವಾಗಿತ್ತು, ಈ ಕುರಿತು ಶಾಸಕರಿಗೆ ಮನವರಿಕೆ ಮಾಡಿದ ಬೆನ್ನಲ್ಲೆ ಬಿಬಿಎಂಪಿ ಅಧಿಕಾರಿಗಳಿಗೆ ಮನವರಿಕೆ ಮಾಡಿ,ಶಿಕ್ಷಕರ ಸಮಸ್ಯೆ ಬಗೆ ಹರಿಸಿದ್ದಾರೆ ಎಂದರು.
ಈ ವೇಳೆ ಉಪಾಧ್ಯಕ್ಷ ಕೆ.ಮಲ್ಲಿಕಾರ್ಜುನರೆಡ್ಡಿ,ತಾಲ್ಲೂಕು ಅಧ್ಯಕ್ಷ ಬಿ.ಎಸ್ ಸಿದ್ದಗಂಗಯ್ಯ, ರಾಜ್ಯ ಸಂಘದ ಸಹ ಕಾರ್ಯದರ್ಶಿ ಆಂಜಿನಪ್ಪ,ಕ.ರಾ.ಸ.ನೌ.ಸಂಘದ ಸದಸ್ಯ ಮಂಜುನಾಥ.ಡಿ ಹಾಗೂ ಜಿಲ್ಲಾ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಶ್ರೀಧರ್,ವಿಭಾಗೀಯ ಕಾರ್ಯದರ್ಶಿಯಾದ ನಾರಾಯಣಪ್ಪ.ಕೆ.ಎಲ್ ,ಹಾಗೂ ಶಿಕ್ಷಕರಾದ ಹನುಮಂತರಾಯಪ್ಪ,ಗಾಳಿಹನುಮಯ್ಯ,ಡಾ.ಅಶ್ವಥನಾರಾಯಣ ಮತ್ತಿತರಿದ್ದರು.
ಇದೇ ವೇಳೆ ಎಪಿಎಂಸಿ ಅಧ್ಯಕ್ಷ ವಿಶ್ವನಾಥರೆಡ್ಡಿ,ತಾಪಂ ಅಧ್ಯಕ್ಷೆ ರತ್ನಮ್ಮ ಹೆಚ್.ಪಿ.ಜಯರಾಂ, ಬಿಇಒ ಬೈಯಪ್ಪರೆಡ್ಡಿ, ಸಮನ್ವಯಾಧಿಕಾರಿ ಹನುಮಂತಪ್ಪ ಅವರನ್ನು ಸಹ ಸನ್ಮಾನಿಸಲಾಯಿತು.