ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಶನಿವಾರ 28 ಮಂದಿ ಕರೊನಾ ಸೋಂಕಿನಿಂದ ಗುಣಮುಖರಾಗುವ ಮೂಲಕ,ತಾಲೂಕಿನಲ್ಲಿಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದವರ ಸಂಖ್ಯೆ 473ಕ್ಕೆ ಏರಿಕೆಯಾಗಿ 500 ಗಡಿಗೆ ಬಂದಿದೆ.ಉಳಿದಂತೆೆ ಇಂದು 33 ಮಂದಿಗೆ ಸೋಂಕು ಧೃಡ ಪಟ್ಟಿದೆ
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ,ಶನಿವಾರ ಸಂಜೆಯವರೆಗೆ ದೊಡ್ಡಬಳ್ಳಾಪುರ ತಾಲ್ಲೂಕಿನ 13 ಪುರುಷರು ಹಾಗೂ 20 ಮಂದಿ ಮಹಿಳೆಯರು ಸೇರಿ ಮುವತ್ ಮೂರು ಜನರಿಗೆ ಸೋಂಕು ದೃಡಪಟ್ಟಿದೆ.
ಹರಿತಲೇಖನಿಗೆ ದೊರಕಿರುವ ವರದಿಯಂತೆ.ವನ್ನಿಗರಪೇಟೆ, ಮಜರಾಹೊಸಹಳ್ಳಿಯಲ್ಲಿ ತಲಾ ನಾಲ್ಕು, ಕೆಂಜಿಗದಹಳ್ಳಿ, ಪಾಲನಜೋಗಹಳ್ಳಿ, ಶ್ರೀನಗರದಲ್ಲಿ ತಲಾ ಮೂರು, ನವಗ್ರಾಮ ದರ್ಗಾಜೋಗಹಳ್ಳಿ, ತೇರಿನ ಬೀದಿ ರಸ್ತೆಯ ಬ್ರಾಹ್ಮಣರ ಬೀದಿ, ತಿಪ್ಪಾಪುರ, ಶಾಂತಿನಗರದಲ್ಲಿ ತಲಾ ಒಂದು ಹಾಗೂ ನೇರಳೆಘಟ್ಟ, ಸೋಮೇಶ್ವರ ಬಡಾವಣೆ, ಕನಸವಾಡಿ ಕಾಲೋನಿ, ತ್ಯಾಗರಾಜನಗರ, ಕುಚ್ಚಪ್ಪನಪೇಟೆ, ಬಾಶೆಟ್ಟಿಹಳ್ಳಿ, ಧರ್ಮರಾಯ ಸ್ವಾಮಿ ನಗರ, ಮುತ್ಯಾಲಮ್ಮ ದೇವಸ್ಥಾನದ ರಸ್ತೆಯ ತಲಾ ಒಬ್ಬರಲ್ಲಿ ಸೊಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 783 ಮಂದಿಗೆ ಸೋಂಕು ತಗುಲಿದ್ದು,473 ಮಂದಿ ಗುಣಮುಖರಾಗಿದ್ದರೆ 19 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 29 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 262 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.