ದೊಡ್ಡಬಳ್ಳಾಪುರ: ಬೆಂಗಳೂರಿನ ಪುಲಕೇಶಿನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಇಟ್ಟು ಅಪಾರ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡಿರುವ ಘಟನೆ ಖಂಡನೀಯವಾಗಿದ್ದು, ಶಾಸಕರಿಗೆ ಜೆಡ್ಪ್ಲಸ್ ಭದ್ರತೆ ನೀಡುವುದರೊಂದಿಗೆ ಘಟನೆಯನ್ನು ಸಿಬಿಐ ತನಿಖೆಗೆ ಒಳಪಡಿಸಬೇಕಿದೆ ಎಂದು ತಾಲೂಕು ಭೋವಿ ಜನಾಂಗ ಸಂಘ ಆಗ್ರಹಿಸಿದೆ.
ನಗರದ ಪರಿವೀಕ್ಷಣಾ ಮಂದಿರದಲ್ಲಿ ತಾಲೂಕು ಭೋವಿ ಜನಾಂಗ ಸಂಘದ ವತಿಯಿಂದ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಓಬದೇನಹಳ್ಳಿ ಕೆ.ಮುನಿಯಪ್ಪ, ಡಿಜಿ ಹಳ್ಳಿ ,ಕೆಜಿ ಹಳ್ಳಿ ಪುಲಕೇಶಿನಗರದಲ್ಲಿ ನಡೆದ ದುರ್ಘಟನೆ ಪೂರ್ವ ನಿಯೋಜಿತ ಮತ್ತು ದುರುದ್ದೇಶಿತವಾಗಿದ್ದು, ಘಟನೆಯ ರೋಪಿಗಳನ್ನು ಬಂಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಘಟನೆ ಇಷ್ಟು ಗಂಭೀರವಾಗದ್ದರೂ ಕಾಂಗ್ರೆಸ್ ನಾಯಕರು ಮಾತನಾಡದಿರುವುದು ಅವರ ಒಳಜಗಳವನ್ನು ತೋರಿಸುತ್ತದೆ ಎಂದರು.
ದಲಿತ ಭೋವಿ ಜನಾಂಗದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹಾಗೂ ಕುಟುಂಬ ವರ್ಗದವರಿಗೆ ಹೆಚ್ಚಿನ ಜೆಡ್ ಪ್ಲಸ್ ಭದ್ರತೆ ಒದಗಿಸಬೇಕು. ಪ್ರಕರಣದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಸರ್ಕಾರದಿಂದ ಪರಿಹಾರ ಕೊಡಬೇಕು. ಸರ್ಕಾರದ ಆಸ್ತಿಯನ್ನು ಸುಟ್ಟು ನಷ್ಟ ಮಾಡಿರುವುದನ್ನು ಖಂಡಿಸಿ ಇಂದು ಶಾಸಕರಿಗೆ,ನಾಳೆ ಮುಖ್ಯಮಂತ್ರಿಗಳಿಗೆ ಮುಂದೊಂದು ದಿನ ವಿಧಾನಸೌದಕ್ಕೂ ಬೆಂಕಿ ಇಡುವ ಕಾಲ ಬರದಂತೆ ತಡೆಯಬೇಕು.ಶಾಸಕರ ಆಪ್ತರಾದ ಮುನೇಗೌಡರವರಿಗೆ ರಕ್ಷಣೆ ಒದಗಿಸಬೇಕು.ಆಗಿರುವ ನಷ್ಟವನ್ನು ಆರೋಪಿಗಳಿಂದ ವಸೂಲು ಮಾಡಿಕೊಡಬೇಕು. ಕಾವಲ್ ಬೈರಸಂದ್ರದಲ್ಲಿ ಸಾರ್ವಜನಿಕರ ಆಸ್ತಿ ನಷ್ಟ ಮಾಡಿದವರಿಂದ ನಷ್ಟ ಭರಿಸಿಕೊಡಬೇಕು.ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ಸಂಘಟನೆಗಳನ್ನು ಕೂಡಲೇ ನಿಷೇಧ ಮಾಡಬೇಕು. ರಾಜ್ಯದ ದಲಿತ ನಾಯಕರುಗಳು ಈ ಕೂಡಲೇ ಪಕ್ಷ ಬೇಧ ಮರೆತು ಶಾಸಕರ ಬೆಂಬಲಕ್ಕೆ ನಿಲ್ಲಬೇಕು.ಕಾಂಗ್ರೆಸ್ ಪಕ್ಷದ ಶಾಸಕರಾದ ಅಖಂಡ ಶ್ರೀನಿವಾಸ ಮೂರ್ತಿ ಅವರ ಬಗ್ಗೆ ಅದೇ ಪಕ್ಷದ ಹಿರಿಯ ಮುಖಂಡರು ಈ ಪ್ರಕರಣವನ್ನು ಗಂಬೀರವಾಗಿ ತೆಗೆದುಕೊಳ್ಳದೇ ಉಗ್ರ ರೀತಿಯಲ್ಲಿ ಖಂಡಿಸದೇ ಸುಮ್ಮನಿರುವುದನ್ನು ನಾವು ಸಂಘಟನೆ ಮೂಲಕ ಖಂಡಿಸುತ್ತಿದ್ದು, ಸರ್ಕಾರಕ್ಕೆ ಹಕ್ಕೊತ್ತಾಯಗಳನ್ನು ಮಂಡಿಸಲಾಗುತ್ತಿದೆ. ಈ ಪ್ರಕರಣವನ್ನು ಗಂಬೀರವಾಗಿ ತೆಗೆದುಕೊಂಡು ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಭೋವಿ ಜನಾಂಗ ಸಂಘದ ಜಿಲ್ಲಾಧ್ಯಕ್ಷ ಟಿ.ಬಸವರಾಜು, ತಾಲೂಕು ಗೌ.ಅಧ್ಯಕ್ಷ ಪಿ.ಎನ್.ರಾಮಚಂದ್ರ, ಕಾರ್ಯದರ್ಶಿ ರಾಮಾಂಜಿನೇಯಲು, ಖಜಾಂಚಿ ವೀರಪ್ಪ, ಉಪಾಧ್ಯಕ್ಷರಾದ ಗಂಗರಾಜು, ವೆಂಕಟೇಶ್, ರವಿಕುಮಾರ್, ಸಹ ಕಾರ್ಯದರ್ಶಿ ಟಿ.ಎನ್.ರಾಮಚಂದ್ರು, ಮುಖಂಡರಾದ ವಸಂತ್ ಕುಮಾರ್, ರಾಜಣ್ಣ, ಸಿದ್ದಪ್ಪ, ಯಲ್ಲಪ್ಪ. ಗುರುಮೂರ್ತಿ, ಆನಂದ್ ಮತ್ತಿತರರು ಹಾಜರಿದ್ದರು.