ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಮಂಗಳವಾರದವರೆಗೆ 517ಮಂದಿ ಕರೊನಾದಿಂದ ಗುಣಮುಖರಾಗಿ ಮನೆಗೆ ಮರಳಿದ್ದರೆ,ಹೊಸದಾಗಿ 17ಮಂದಿಗೆ ಸೋಂಕು ದೃಢಪಟ್ಟಿದೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ,ಮಂಗಳವಾರದ ಸಂಜೆಯ ವರಗೆ.ದೊಡ್ಡಬಳ್ಳಾಪುರ ತಾಲ್ಲೂಕಿನ 11 ಪುರುಷರು ಹಾಗೂ 6ಮಂದಿ ಮಹಿಳೆಯರು ಸೇರಿ ಹದಿನೇಳು ಜನರಿಗೆ ಸೋಂಕು ದೃಡಪಟ್ಟಿದ್ದು,26 ಮಂದಿಗೆ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಹರಿತಲೇಖನಿಗೆ ದೊರಕಿರುವ ವರದಿಯಂತೆ.ವನ್ನಿಗರಪೇಟೆ 3, ಕರೇನಹಳ್ಳಿ,ಮಾರುತಿನಗರ 2 ಹಾಗೂ ಗಡ್ಡಂಬಚ್ಚಹಳ್ಳಿ, ಕೋಡಿಪಾಳ್ಯ, ಟಿಬಿ ವೃತ್ತದ ಬಳಿಯ ಯೋಗಿ ನಾರಾಯಣ ಬಡಾವಣೆ, ಮುತ್ತೂರು, , ಮಜರಾಹೊಸಹಳ್ಳಿ, ತ್ಯಾಗರಾಜನಗರ, ಲಘುಮೇನಹಳ್ಳಿ, ನಾರಾಯಣಪ್ಪ ಬಡಾವಣೆ, ಬಾಶೆಟ್ಟಿಹಳ್ಳಿ ಮತ್ತು ಲಕ್ಷ್ಮಿದೇವಿಪುರದ ತಲಾ ಒಬ್ಬರಲ್ಲಿ ಸೊಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 833 ಮಂದಿಗೆ ಸೋಂಕು ತಗುಲಿದ್ದು, 517 ಮಂದಿ ಗುಣಮುಖರಾಗಿದ್ದರೆ 20 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 30ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 266 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರ ಹಾಗೂ ಕೆಂಗೇರಿಯ ಮಹಾವೀರ್ ಜೈನ್ ವಿದ್ಯಾರ್ಥಿ ನಿಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.