ದೊಡ್ಡಬಳ್ಳಾಪುರ: ಕೋವಿಡ್–19 ಕಾರಣದಿಂದಾಗಿ ಶಾಲೆ ಆರಂಭವಾಗದಿದ್ದರೂ ಮಕ್ಕಳ ಕಲಿಕೆ, ಬೋಧನೆಗೆ ತೊಂದರೆಯಾಗಬಾರದು, ಶೈಕ್ಷಣಿಕ ವಿಚಾರಗಳಿಂದ ಅವರು ದೂರ ಉಳಿಯಬಾರದು ಎಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ರೂಪಿಸಿರುವ ‘ವಿದ್ಯಾಗಮ’ ಎಂಬ ವಿಶಿಷ್ಟ ಯೋಜನೆ ತಾಲೂಕಿನಲ್ಲಿ ಚಾಲನೆ ನೀಡಲಾಗಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ತಿಳಿಸಿದರು.
ತಾಲ್ಲೂಕಿನ ಆಲಳ್ಳಿ,ಕೊನಘಟ್ಟ,ತಿಮಸಂದ್ರ ಗ್ರಾಮದ ಶಾಲೆಗಳಿಗೆ ಭೇಟಿ ನೀಡಿ ಯೋಜನೆಯ ಅನುಷ್ಠಾನದ ಪರಿಶೀಲನೆ ನಡೆಸಿದ ಅವರು ಹರಿತಲೇಖನಿಗೆ ಮಾಹಿತಿ ನೀಡಿದರು.
ಮಕ್ಕಳ ಸಾಮಾರ್ಥ್ಯಕ್ಕೆ ಅನುಗುಣವಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮಕ್ಕಳ ಮನೆ ಅಸುಪಾಸಿನಲ್ಲಿನ ಅರಳಿ ಕಟ್ಟೆ, ಊರಿನ ಕಟ್ಟೆ, ಹಾಲ್. ದೇವಾಲಯದ ಆವರಣ ಹೀಗೆ ಎಲ್ಲಿ ಸ್ಥಳಾವಕಾಶ ಇದೆಯೋ ಅಲ್ಲಿ ಮಕ್ಕಳನ್ನು ಸೇರಿಸಿ, ಕೋವಿಡ್ ಮುಂಜಾಗ್ರತಾ ನಿಯಮಗಳನ್ನು ಪಾಲಿಸಿಕೊಂಡು ಪಾಠಕ್ಕೆ ಸಂಬಂಧಿಸಿದ ವಿಚಾರಗಳನ್ನು ತಿಳಿಸಲಾಗುತ್ತಿದೆ.
ಪ್ರಸ್ತುತ ತಾಲ್ಲೂಕಿನಾದ್ಯಂತ ಎಲ್ಲ ಶಿಕ್ಷಕರು ಮಕ್ಕಳ ಜೊತೆ ಸಂಪರ್ಕದಲ್ಲಿದ್ದು ನಿರಂತರ ಕಲಿಕೆ ನೆರವಾಗುತ್ತಿದ್ದು ಪೋಷಕರ ಪ್ರಶಂಸೆಗೆ ಕಾರಣರಾಗಿದ್ದಾರೆ.
ವಿದ್ಯಾಗಮ ಅಡಿಯಲ್ಲಿ ಸ್ಮಾರ್ಟ್ ಪೋನ್ ಮತ್ತು ಇಂಟರ್ನೆಟ್ ಸೌಲಭ್ಯ ಹೊಂದಿರುವರಿಗೆ ಆನ್ ಲೈನ್ ತರಗತಿ, ಟಿವಿ ಸೌಲಭ್ಯ ಇರುವ ಮಕ್ಕಳಿಗೆ ಚಂದನ ವಾಹಿನಿಯಲ್ಲಿ ಬೋಧನೆ.ಇಂಟರ್ನೆಟ್ ಸೌಲಭ್ಯ ಹೊಂದಿರದವರಿಗೆ ವಿದ್ಯಾಗಮ ಯೋಜನೆಯಡಿ ತರಗತಿ ನಡೆಸಲಾಗುತ್ತಿದೆ.
ಪ್ರತಿ ತರಗತಿಯ ಮಕ್ಕಳು ಕಲಿಯಬೇಕಾದ ಸಾಮರ್ಥ್ಯಗಳ ಕಲಿಕೆಗೆ ಕಲಿಕೋಪಕರಣಗಳನ್ನ ಬಳಸಿಕೊಂಡು ಶಿಕ್ಷಕರು,ಪೋಷಕರು ಹಾಗೂ ಎಸ್ ಡಿಎಂಸಿ ಸಮಿತಿ ಸೂಚಿಸಿದ ಹೊರಾಂಗಣದಲ್ಲಿ ಪಾಠ ಮಾಡುತ್ತಿದ್ದಾರೆ ಎಂದರು.