ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಂದು (ಆಗಸ್ಟ್ 19 ರಂದು) 46 ಪುರುಷರು ಹಾಗೂ 22 ಮಹಿಳೆಯರು ಸೇರಿದಂತೆ 68 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದು, ದೇವನಹಳ್ಳಿ ತಾಲ್ಲೂಕಿನಲ್ಲಿ ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆಂದು ಜಿಲ್ಲಾಡಳಿತದ ವರದಿ ತಿಳಿಸಿದೆ.
ವರದಿಯ ಅನ್ವಯ ನೆಲಮಂಗಲ ತಾಲ್ಲೂಕಿನಲ್ಲಿ 10 ಪುರುಷರು, ಹೊಸಕೋಟೆ ತಾಲ್ಲೂಕಿನಲ್ಲಿ 12 ಪುರುಷರು ಮತ್ತು 11 ಮಹಿಳೆಯರು, ದೇವನಹಳ್ಳಿ ತಾಲ್ಲೂಕಿನಲ್ಲಿ 7 ಪುರುಷರು ಮತ್ತು 2 ಮಹಿಳೆಯರು ಹಾಗೂ ಬೆಂಗಳೂರು ನಗರ ಜಿಲ್ಲೆ ಮತ್ತು ಇತರೆ ಜಿಲ್ಲೆಗಳಿಗೆ ಸೇರಿದ 6 ಪುರುಷರು ಮತ್ತು 5 ಮಹಿಳೆಯರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.
ದೇವನಹಳ್ಳಿ ತಾಲ್ಲೂಕಿನಲ್ಲಿ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ 53 ವರ್ಷದ ವ್ಯಕ್ತಿಯೊಬ್ಬ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ.
ಉಳಿದಂತೆ ಕೋವಿಡ್-19 ಬುಲೆಟಿನ್ ಕುರಿತು ದೊಡ್ಡಬಳ್ಳಾಪುರ ತಾಲೂಕು ಆಡಳಿತ ವರದಿ ಹಾಗೂ ಜಿಲ್ಲಾಡಳಿತದ ವರದಿಯಲ್ಲಿ ವೆತ್ಯಾಸದ ಕಾರಣ ಹರಿತಲೇಖನಿ ಜಿಲ್ಲಾಡಳಿತ ನೀಡಿರುವ ದೊಡ್ಡಬಳ್ಳಾಪುರದ ವರದಿ ಪ್ರಕಟಿಸುತ್ತಿಲ್ಲ.