ಚೆನ್ನೈ: ಕರೊನಾ ಸೋಂಕಿನ ಚಿಕಿತ್ಸೆಗೆ ದಾಖಲಾಗಿರುವ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಂಭೀರ ಸ್ಥಿತಿ ಮುಂದುವರಿದಿದೆ ಎಂದು ಚೆನ್ನೈನ ಎಂಜಿಎಂ ಆಸ್ಪತ್ರೆ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಿದೆ.
ಎಸ್ಪಿಬಿ ಅವರು ಇನ್ನೂ ವೆಂಟಿಲೇಟರ್ ಸಹಾಯದಲ್ಲಿಯೇ ಇದ್ದಾರೆ. ತಜ್ಞರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಮಾಹಿತಿ ನೀಡಿರುವ ಆಸ್ಪತ್ರೆ.ದೇಶದ ಕೆಲವು ತಜ್ಞರು ಮಾತ್ರವಲ್ಲ, ವಿದೇಶಗಳ ಖ್ಯಾತ ತಜ್ಞ ವೈದ್ಯರ ಸಲಹೆಯನ್ನೂ ಪಡೆದು ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅವರಲ್ಲಿ ಕಿಂಚಿತ್ತೂ ಸುಧಾರಣೆ ಕಾಣುತ್ತಿಲ್ಲ ಎಂದು ಹೆಲ್ತ್ಬುಲೆಟಿನ್ನಲ್ಲಿ ಉಲ್ಲೇಖಿಸಿದೆ.
ಮತ್ತೊಂದೆಡೆ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಶ್ರದ್ಧಾಂಜಲಿ ಸಂದೇಶವನ್ನು ಹರಿಬಿಟ್ಟಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಷವಾಗಿದೆ.