ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಂದು (ಆಗಸ್ಟ್ 25 ರಂದು) 42 ಪುರುಷರು ಹಾಗೂ 21 ಮಹಿಳೆಯರು ಸೇರಿದಂತೆ 63 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಡಳಿತದ ವರದಿ ತಿಳಿಸಿದೆ.
ಜಿಲ್ಲೆಯ ನೆಲಮಂಗಲ ತಾಲ್ಲೂಕಿನಲ್ಲಿ 19 ಪುರುಷರು ಮತ್ತು 8 ಮಹಿಳೆಯರು, ಹೊಸಕೋಟೆ ತಾಲ್ಲೂಕಿನಲ್ಲಿ 8 ಪುರುಷರು ಮತ್ತು 3 ಮಹಿಳೆಯರು, ದೇವನಹಳ್ಳಿ ತಾಲ್ಲೂಕಿನಲ್ಲಿ 4 ಪುರುಷರು ಮತ್ತು 5 ಮಹಿಳೆಯರು ಹಾಗೂ ಬೆಂಗಳೂರು ನಗರ ಮತ್ತು ಇತರೆ ಜಿಲ್ಲೆಗಳಿಗೆ ಸೇರಿದ 7 ಪುರುಷರು ಮತ್ತು 2 ಮಹಿಳೆಯರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.
ಉಳಿದಂತೆ ಸಾವಿನ ಪ್ರಕರಣವಾಗಲಿ, ದೊಡ್ಡಬಳ್ಳಾಪುರ ತಾಲೂಕು ಆಡಳಿತ ನೀಡಿರುವ ವರದಿಯಾಗಲಿ ತಾಳೆಯಾಗದ ಕಾರಣ ಹರಿತಲೇಖನಿ ಜಿಲ್ಲಾಡಳಿತ ನೀಡಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ವರದಿ ಪ್ರಕಟಿಸುತ್ತಿಲ್ಲ.