ದೊಡ್ಡಬಳ್ಳಾಪುರ: ತಾಲೂಕಿನ ಅಕ್ಕಪಕ್ಕದ ಎರಡು ಗ್ರಾಮಗಳಲ್ಲಿ ಹಾಡಹಗಲೇ ಸರಣಿ ಕಳ್ಳತನ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಿರುಮಗೊಂಡನಹಳ್ಳಿ ಮತ್ತು ಹಾಡೋನಹಳ್ಳಿ ಗ್ರಾಮಗಳಲ್ಲಿ ಕಳ್ಳತನ ನಡೆದಿದ್ದು,ಒಂದು ಗ್ರಾಮದಲ್ಲಿ ನಗದು ಮತ್ತೊಂದು ಗ್ರಾಮದಲ್ಲಿ ಒಡವೆಗಳನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ತಾಲೂಕಿನ ತಿರುಮಗೊಂಡನಹಳ್ಳಿ ರಾಜಣ್ಣ ಎಂಬುವವರ ಮನೆಗೆ ನುಗ್ಗಿದ್ದ ಕಳ್ಳರು,1 ಲಕ್ಷ ರೂ. ನಗದು ಹಾಗೂ ಒಡವೆ ದೋಚಿ ಪರಾರಿಯಾಗಿದ್ದಾರೆ.ಅಲ್ಲದೆ ಮೂರು ಗಂಟೆಯ ಸುಮಾರಿನಲ್ಲಿ ಹಾಡೋನಹಳ್ಳಿ ಗ್ರಾಮದಲ್ಲಿಯೂ ಕೂಡ ಕಳ್ಳರು ಕೈಚಳಕ ತೋರಿಸಿದ್ದಾರೆ. ಗ್ರಾಮದ ರುದ್ರಪ್ಪನವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯವರು ಮನೆಗೆ ಬೀಗ ಹಾಕಿ ದೇವರ ಕಾರ್ಯಕ್ಕೆ ಹೋಗಿದ್ದರು. ಈ ವೇಳೆ ಮನೆಯ ಬೀಗ ಒಡೆದು ಬೀರುವಿನಲ್ಲಿದ್ದ 25 ನಗದು ಹಾಗೂ ಒಡವೆಗಳನ್ನು ದೋಚಿ ಪರಾರಿಯಾಗಿದ್ದಾರೆಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಗ್ರಾಮಾಂತರ ಠಾಣೆ ಸಬ್ ಇನ್ಸ್ಪೆಕ್ಟರ್ ಗಜೇಂದ್ರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.