ದೊಡ್ಡಬಳ್ಳಾಪುರ: ಕೊವಿಡ್-19 ಕಾರಣದಿಂದಾಗಿ ನೇಕಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ವಿದ್ಯುತ್ ಬಿಲ್ ಕಟ್ಟಿಲ್ಲ ಎಂದು ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವುದನ್ನು ವಿರೋಸಿ ಕರ್ನಾಟಕ ನೇಕಾರರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನೇಕಾರರು ಬೆಸ್ಕಾಂಕ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ನೇಕಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪಿ.ಎ.ವೆಂಕಟೇಶ್, ಕೊರೊನಾ ಕಾರಣದಿಂದಾಗಿ ನೇಕಾರರು ನೇಯ್ದ ಬಟ್ಟೆಗಳಿಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ನೇಕಾರರು ಜೀವನ ಸಾಗಿಸುವುದೇ ಕಷ್ಟವಾಗಿದೆ. ಈ ವೇಳೆ ಬೆಸ್ಕಾಂ ಅಕಾರಿಗಳು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ನೇಕಾರರ ಮನೆಗಳಿಗೆ ತೆರಳಿ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದ್ದಾರೆ.
ನೇಕಾರರ ಸಂಘಟನೆಗಳಿಂದ ಈಗಾಗಲೇ ಗೃಹಬಳಕೆ ವಿದ್ಯುತ್ ಸೇರಿದಂತೆ ನೇಕಾರರ ವಿದ್ಯುತ್ ಬಿಲ್ ಮನ್ನಾ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ನೇಕಾರರು ಸಂಪರ್ಕ ಕಡಿತ ಮಾಡಬೇಡಿ ಎಂದು ಮನವಿ ಮಾಡಿದರೂ ಸಹ ಅಕಾರಿಗಳು ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದ್ದಾರೆ. ಇದರಿಂದ ಅನಿವಾರ್ಯವಾಗಿ ಇಂದು ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗಿದೆ. ಸೆ.4ರಂದು ಜಿಲ್ಲಾಕಾರಿಗಳ ಕಚೇರಿಯಲ್ಲಿ ಜವಳಿ ಇಲಾಖೆ, ಬೆಸ್ಕಾಂ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಕಾರಿಗಲೋಂದಿಗೆ ಸಭೆ ನಿಗದಿ ಪಡಿಸಲಾಗಿದೆ. ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗುವುದು ಅಲ್ಲಿಯವರೆಗೆ ಯಾವುದೇ ನೇಕಾರರ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಬಾರದು ಎಂದು ಮನವಿ ಮಾಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಬೆಸ್ಕಾಂ ಸಹಾಯಕ ಅಭಿಯಂತರ ಎನ್.ರೋಹಿತ್, ನೇಕಾರರ ವಿದ್ಯುತ್ ಬಿಲ್ ಮನ್ನಾ ಕುರಿತಂತೆ ನಮಗೆ ಯಾವುದೇ ಆದೇಶ ಬಂದಿಲ್ಲ. ನಮ್ಮ ಕರ್ತವ್ಯ ನಾವು ಮಾಡುತ್ತಿದ್ದೇವೆ. ಈಗಾಗಲೇ ನಗರದಲ್ಲಿ ಶೇ.75 ಪವರ್ ವಿದ್ಯುತ್ ಸಂಪಕಗಳ ಬಾಕಿ ಇದೆ. ನೇಕಾರರ ಮನವಿಯನ್ನು ಮೇಲಕಾರಿಗಳಿಗೆ ತಿಳಿಸಲಾಗುವುದು. ಗೃಹ ವಿದ್ಯುತ್ ಬಿಲ್ಗಳನ್ನಾದರೂ ಸಹ ನೇಕಾರರು ಪಾವತಿಸಬೇಕು ಹಾಗೂ ಪವರ್ ಸಂಪರ್ಕಗಳ ಬಾಕಿಯನ್ನು ತಮ್ಮ ಕೈಲಾದಷ್ಟು ಪಾವತಿಸಿದರೆ ಅನುಕೂಲ ಎಂದು ಮನವಿ ಮಾಡಿದರು.