ದೊಡ್ಡಬಳ್ಳಾಪುರ : ಮೇವನ್ನು ಹರಿಸುತ್ತ ಬಂದು ಆಯ ತಪ್ಪಿ ಬಿದ್ದು ತೀವ್ರವಾಗಿ ಅಸ್ವಸ್ಥವಾಗಿದ್ದ ಹಸುವಿಗೆ ತ್ವರಿತವಾಗಿ ಚಿಕಿತ್ಸೆ ದೊರಕಿಸುವ ಮೂಲಕ ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ಮಾನವೀಯತೆ ಮೆರೆದಿರುವ ಘಟನೆ ಜಿಲ್ಲಾಪಂಚಾಯಿತಿ ಕಂಚೇರಿ ಹಿಂಭಾಗ ನಡೆದಿದೆ
ಘಟನೆಯ ವಿವರ
ಜಿಲ್ಲಾಪಂಚಾಯಿತಿ ಕಚೇರಿಯ ಹಿಂಬಾಗದಲ್ಲಿನ ಬಯಲು ಪ್ರದೇಶದಲ್ಲಿ ಮೇವನ್ನರಿಸುತ್ತ ಸಾಗಿದ್ದ ಸೀಮೆ ಹಸುವೊಂದು 5 ಅಡಿ ಎತ್ತರದಿಂದ ಕೆಳಗೆ ಬಿದ್ದಿದೆ.ಈ ವೇಳೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ಕಿಟಕಿ ಮೂಲಕ ಘಟನೆಯನ್ನು ಕಂಡು ಸ್ಥಳಕ್ಕೆ ದೌಡಾಯಿಸಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿದ್ದ ಹಸುವನ್ನುಕಂಡ ಕೂಡಲೆ, ಪಶು ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿ ಚಿಕಿತ್ಸೆ ಕೊಡಿಸಿದರು.
ಪ್ರಸ್ತುತ ಹಸು ಆರೋಗ್ಯವಾಗಿದ್ದು,ಜಿಲ್ಲಾಪಂಚಾಯಿತಿ ಉಪಾಧ್ಯಕ್ಷ ಕನ್ಯಾಕುಮಾರಿ ಶ್ರೀನಿವಾಸ್ ಅವರ ಮಾನವೀಯ ಕಾರ್ಯಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.