ದೊಡ್ಡಬಳ್ಳಾಪುರ: ಆನ್ಲೈನ್ ಕ್ಲಾಸ್ನಲ್ಲಿ ಮೈಮರೆತಿದ್ದ ಬಾಲಕನೋರ್ವ ಜೋಳಿಗೆಯ ಹುರುಳಿಗೆ ಸಿಕ್ಕು ಸಾವನಪ್ಪಿರುವ ಘಟನೆ ನಗರದ ಹೊರವಲಯದ ದರ್ಗಾಜೋಗಹಳ್ಳಿಯಲ್ಲಿ ನಡೆದಿದೆ.
ಮೃತ ಮಗುವನ್ನು ವಿಶ್ವಾಸ್(10) ಎಂದು ಗುರುತಿಸಲಾಗಿದ್ದು, ದರ್ಗಾಜೋಗಳ್ಳಿಯ ನವಗ್ರಾಮದ ಮಂಜುನಾಥ್ ಎನ್ನುವವರ ಮಗ ಎನ್ನಲಾಗಿದೆ.
ನಗರದ ಖಾಸಗಿ ಶಾಲೆಯ 5ನೇ ತರಗತಿ ವಿದ್ಯಾರ್ಥಿಯಾದ ಮೃತ ವಿಶ್ವಾಸ್. ಗುರುವಾರ ಸಂಜೆ ಆನ್ಲೈನ್ ತರಗತಿಗೆಂದು ಕೋಣೆಗೆ ಸೇರಿದ್ದು, ಈ ವೇಳೆ ಮನೆಯಲ್ಲಿನ ಎರಡು ವರ್ಷದ ಮತ್ತೊಂದು ಮಗುವನ್ನು ಮಲಗಿಸಲು ಹಾಕಿದ್ದ ಜೋಳಿಗೆಯಲ್ಲಿ ಕುಳಿತು ಪಾಠ ಕೇಳುವ ವೇಳೆ ಈ ದುರ್ಘಟನೆ ನಡೆದಿದೆ ಎಂದು ಹರಿತಲೇಖನಿಗೆ ಪೊಲೀಸ್ ಮೂಲಗಳು ತಿಳಿಸಿವೆ.
ಆನ್ಲೈನ್ ತರಗತಿಯ ಸಮಯ ಮುಗಿದರು ಮಗು ಹೊರ ಬಾರದಿರುವುದನ್ನು ಕಂಡ ಪೋಷಕರು ಬಾಗಿಲು ಬಡಿದಾಗ ಘಟನೆ ಕಂಡುಬಂದಿದೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.