ದೆಹಲಿ: ಕೊರೊನಾ ಸೋಂಕು ನಿಗ್ರಹಕ್ಕಾಗಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ನನ್ನು ಕೇಂದ್ರ ಸರ್ಕಾರ ಹಂತ ಹಂತವಾಗಿ ತೆರವುಗೊಳಿಸುತ್ತಿದೆ.
ಹೊಸ ಅನ್‌ಲಾಕ್ 4 ಮಾರ್ಗಸೂಚಿಯಲ್ಲಿ ಶಾಲೆ ತೆರೆಯಲು ಅನುಮತಿ ನೀಡಿಲ್ಲ.ಆದರೆ ಪೋಷಕರ ಒಪ್ಪಿಗೆ ಪಡೆದು ಶಾಲೆಗೆ ತೆರಳಿ ಮಾರ್ಗದರ್ಶನ ಪಡೆಯಲು ಕೇಂದ್ರ ಸರ್ಕಾರದ ಅನುಮತಿ ನೀಡಿದೆ.
ಸೆ.21ರಿಂದ ಕಂಟೈನ್ಮೆಂಟ್ ಪ್ರದೇಶದ ಹೊರಗಡೆ ಇರುವ ಪ್ರದೇಶದಲ್ಲಿರುವ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳು ಆನ್‌ಲೈನ್ ಕ್ಲಾಸ್ ವೇಳೆ ಶಾಲೆಗಳಿಗೆ ತೆರಳಿ ಶಿಕ್ಷಕರಿಂದ ಮಾರ್ಗದರ್ಶನ ಪಡೆಯಲು ಅನುಮತಿ ನೀಡಲಾಗಿದೆ.ಆದರೆ ಈ ರೀತಿ ಮಾರ್ಗದರ್ಶನ ಪಡೆಯಲು ಪೋಷಕರಿಂದ ಕಡ್ಡಾಯವಾಗಿ ಅನುಮತಿ ಪಡೆಯಲು ಸೂಚಿಸಿದೆ.
ಈ ಸಂದರ್ಭದಲ್ಲಿ ಶೇ.50ರಷ್ಟು ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಆನ್‌ಲೈನ್ ತರಗತಿಗಾಗಿ ಶಾಲೆಗೆ ಬಂದು ಪಾಠ ಮಾಡಲು ಅವಕಾಶ ನೀಡಿದೆ.ಅಲ್ಲದೆ ಈ ಸಂದರ್ಭದಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕೆಂದು ಸೂಚಿಸಿದೆ.