ದೊಡ್ಡಬಳ್ಳಾಪುರ: ಲಯನ್ಸ್ ಕ್ಲಬ್ ವತಿಯಿಂದ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಆರ್.ಎಸ್. ಮಂಜುನಾಥ್ ವಹಿಸಿದ್ದರು.
ಈ ವೇಳೆ ವೈದ್ಯಕೀಯ ಸೇವೆ ಪರಿಗಣಿಸಿ ವೈದ್ಯರಾದ ಡಾ.ವಿಜಯಕುಮಾರ್,ಡಾ.ಇಂದಿರಾಪ್ರಸಾದ್,ಡಾ.ಅಂಬಿಕ,ಡಾ.ಮುನಿರಾಜ್,ಡಾ ಲ.ಸುರೇಶ್,ಡಾ.ರಮೇಶ್,ಡಾ. ಕುಮದ,ಡಾ.ರಾಮಚಂದ್ರಪ್ಪ ಹಾಗೂ ಡಾ.ರವಿಕಿರಣ್ ಅವರನ್ನು ಅಭಿನಂದಿಸಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಲಯನ್ ಕೆ ಎಂ ಹನುಮಂತರಾಯಪ್ಪ,
ಲಯನ್ ಜೆ ರಾಜೇಂದ್ರ ಭಾಗವಹಿಸಿದ್ದರು.ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಅಕ್ಕ ಶೋಬಾ, ಲಯನ್ಸ್ ಕೋಶಾಧಿಕಾರಿ ಹುಲಿಕಲ್ ನಟರಾಜ್,ಕಾರ್ಯದರ್ಶಿ ಎಂ.ಆರ್.ಶ್ರೀನಿವಾಸ್,ಸಹ ಕಾರ್ಯದರ್ಶಿ ಮಂಗಳಗೌರಿ ಪರ್ವತಯ್ಯ ಮತ್ತಿತರಿದ್ದರು.