ದೊಡ್ಡಬಳ್ಳಾಪುರ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ,ಭೂ ಮಂಜುರಾತಿ ಮಾಜಿ ಸದಸ್ಯ ರಾಮದೇವಹಳ್ಳಿ ರಾಮಲಿಂಗಯ್ಯ(59) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಂಗಳವಾರವಷ್ಟೆ 60 ಜನ್ಮದಿನದ ಸಂಭ್ರಮವನ್ನು ಆಚರಿಸಲಿದ್ದ ರಾಮಲಿಂಗಯ್ಯ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆಯಾದ ಪತ್ನಿ ಚನ್ನಮ್ಮ ಹಾಗೂ ಮಗಳನ್ನು ಅಗಲಿದ್ದಾರೆ.
ರಾಜಕೀಯ ವಲಯದಲ್ಲಿ ಸಕ್ರಿಯರಾಗಿದ್ದ ರಾಮಲಿಂಗಯ್ಯ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ.