ದೊಡ್ಡಬಳ್ಳಾಪುರ: ಮಳೆ ನೀರು ಸಂರಕ್ಷಣೆ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಗರಸಭೆ ಅವರಣದಲ್ಲಿ ಮಳೆ ನೀರು ಸಂರಕ್ಷಣೆ ಕುರಿತು ಪ್ರಾತ್ಯಕ್ಷಿಕೆ ಆಯೋಜಿಸಲಾಗಿದೆ.
ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿದ ಪೌರಾಯುಕ್ತ ರಮೇಶ್ ಎಸ್.ಸುಣಗಾರ್ ಮಾತನಾಡಿ, ನೀರು ಅತ್ಯಮೂಲ್ಯ ಸಂಪತ್ತು.ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ.ಮಳೆಗಾಲ ಆರಂಭವಾಗಿದೆ. ಮಳೆ ನೀರನ್ನು ಸಂಗ್ರಹಿಸಬೇಕಾದ ಸಮಯ ಬಂದಿದೆ. ಬೇಸಿಗೆಯ ಬವಣೆಗೆ ಪರಿತಪಿಸುವ ಜನರು ಮಳೆಗಾಲ ಬಂತೆಂದರೆ ಅದನ್ನು ಮರೆತುಬಿಡುತ್ತಾರೆ.ನೀರಿನ ಅಭಾವ ತಲೆದೋರಿದಾಗ ಬೋರ್‌ವೆಲ್ ಮೊರೆ ಹೋಗುವುದು ಸಾಮಾನ್ಯ.ಆದರೆ ಅದೂ ಕೂಡಾ ಕೈಗೆಟುಕುತ್ತಿಲ್ಲ. ಅತಿ ಹೆಚ್ಚು ಅಡಿ ಆಳಕ್ಕೆ ಅಂತರ್ಜಲ ಇಳಿದುಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಿದ್ದ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವುದೇ ಜಾಣತನ ಎಂದರು.
ಈ ವೇಳೆ ನಗರಸಭೆ ಇಂಜಿನಿಯರ್ ಗಳಾದ ಶೇಕ್ವಫಿರೋಝ್,ರಾಮೇಗೌಡ,ರಘುನಾಥ್, ಚಂದ್ರಶೇಖರ್ ಮತ್ತಿತರಿದ್ದರು.