ದೊಡ್ಡಬಳ್ಳಾಪುರ: ಹಿರಿಯ ರಂಗಭೂಮಿ ಕಲಾವಿದರಾದ ಕೆ.ಸಿ.ನಾರಾಯಣಪ್ಪರವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ ಆಯ್ಕೆ ಆಗಿರುವ ಹಿನ್ನೆಲೆ ತಾಲೂಕು ಕನ್ನಡ ಪಕ್ಷದಿಂದ ಅಭಿನಂದನೆ ಸಲ್ಲಿಸಲಾಯಿತು.
ಈ ವೇಳೆ ಕನ್ನಡ ಪಕ್ಷದ ತಾಲೂಕು ಅಧ್ಯಕ್ಷ ಸಂಜೀವ್ ನಾಯಕ ಮಾತಾಡಿ,ದೊಡ್ಡಬಳ್ಳಾಪುರದ ಹಿರಿಮೆಯಾಗಿರುವ ಕೆ.ಸಿ.ನಾರಾಯಣಪ್ಪರವರಿಗೆ ಗೌರವ ಪ್ರಶಸ್ತಿ ದೊರೆತಿರುವುದು ತಾಲೂಕಿಗೆ ಸಂದ ಗೌರವವಾಗಿದೆ. ರಂಗಭೂಮಿ ಕ್ಷೇತ್ರಕ್ಕೆ ಕೆ.ಸಿ.ನಾರಾಯಣಪ್ಪರ ಕುಟುಂಬದ ಸೇವೆ ಅಪಾರವಾದದ್ದು ಎಂದರು.
ಈ ವೇಳೆ ಕನ್ನಡ ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜಿನೇಯ, ಮುಖಂಡರಾದ ಪರಮೇಶ್, ಹೆಚ್.ಪ್ರಕಾಶ್ ರಾವ್, ಡಿ.ವೆಂಕಟೇಶ್, ಮಂಜುನಾಥ್ ಸ್ವಾಮಿ, ಆಟೋ ರಾಮು, ರಂಗಣ್ಣ, ರಾಮಚಾರಿ, ವೆಂಕಟರಾಜು, ಶಿವಕುಮಾರ್ ಮತ್ತಿತರಿದ್ದರು.