ಬೆಂಗಳೂರು: ಹಿರಿಯ ನಟ ಸಿದ್ದರಾಜ್ ಕಲ್ಯಾಣ್ಕರ್( 60 )ಹೃದಯಾಘಾತ ನಿಧನರಾಗಿದ್ದಾರೆ.
60 ವರ್ಷ ವಯಸ್ಸಿನ ಸಿದ್ದರಾಜ್ ಅವರಿಗೆ ಕಳೆದ ರಾತ್ರಿ ಹೃದಯಾಘಾತ ಉಂಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.ಅಂತ್ಯಕ್ರಿಯೆ ಹುಬ್ಬಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂದ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.
ಹುಬ್ಬಳ್ಳಿ ಮೂಲದವರಾದ ಸಿದ್ದರಾಜ್ ನಾಟಕಗಳಿಂದ ಪ್ರಸಿದ್ಧಿ ಪಡೆದವರು. ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದವರಾಗಿದ್ದರು.