ಬೆಂಗಳೂರು: ಭಾರತದ ಮೊದಲ ಸಂಯೋಜಿತ ಏರ್ ಆಂಬ್ಯುಲೆನ್ಸ್ ಸೇವೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಉದ್ಘಾಟಿಸಿದರು.
ಈ ವೇಳೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಡಾ. ಸಿ.ಎನ್.ಅಶ್ವತ್ಥ್ ನಾರಾಯಣ್, ಆರೋಗ್ಯ ಸಚಿವ ಬಿ. ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಹಾಗೂ ಮೆ: ಐಸಿಎಟಿಟಿ ಕ್ಯಾತಿ ಏರ್ ಆಂಬ್ಯುಲೆನ್ಸ್ ಸರ್ವಿಸ್ ನ ಸಿಇಒ ಡಾ. ಶಾಲಿನಿ ನಲ್ವಾಡ್ ಉಪಸ್ಥಿತರಿದ್ದರು.