ಕರೊನಾ ಸೋಂಕು ತಡೆಗಟ್ಟಲು ಜಾರಿ ಮಾಡಿರುವ ಲಾಕ್‍ಡೌನ್ ವೇಳೆ ಸೆಕ್ಷನ್ 144 ಸಹ ಜಾರಿ ಮಾಡಲಾಗಿದೆ. ಕರೊನಾ ಸೋಂಕು ತಡೆಗಟ್ಟಲು ಪೊಲೀಸರ ಶ್ರಮ ಪ್ರಶಂಸನೀಯ. ಆದರೆ ರಸ್ತೆಗೆ ಬರುವವರ ಮೇಲೆ ಏಕಾಏಕಿ ಲಾಠಿ ಬೀಸುತ್ತಿರುವುದು ಸಾರ್ವಜನಿಕರ ಆಕ್ಷೇಪಕ್ಕೂ ಕಾರಣವಾಗಿದೆ. ಆಗಾದರೆ ಸೆಕ್ಷನ್ 144 ಅಂದರೆ ಏನು….? ತಿಳಿಯೋಣಾ ಬನ್ನಿ.
ಭಾರತೀಯ ದಂಡ ಸಂಹಿತೆ ಕಲಂ 141 ರಿಂದ 144 ರ ಅಡಿ ಅಕ್ರಮ ಗುಂಪುಗಾರಿಕೆ, ಕಾನೂನುಬಾಹಿರ ಚಟುವಟಿಕೆಗಳು ನಡೆದಂತ ಸಂದರ್ಭದಲ್ಲಿ ಪೊಲೀಸರು ಜಿಲ್ಲಾ ಮ್ಯಾಜಿಸ್ಟ್ರೇಟ್ ರವರ ಹಾಜರಿಯಲ್ಲಿ ಅವರ ಅನುಮತಿ ಮೇರೆಗೆ ಜನರ ಮೇಲೆ ಬಲಪ್ರಯೋಗ ಮಾಡಬಹುದು.
ಜಿಲ್ಲಾ ಮ್ಯಾಜಿಸ್ಟ್ರೇಟ್ ರವರ ಅನುಮತಿ ಇಲ್ಲದೆ ಪೊಲೀಸ್ ಸಿಬ್ಬಂದಿ ಜನರ ಮೇಲೆ ಬಲಪ್ರಯೋಗ ಮಾಡಲು ಯಾವುದೇ ಕಾನೂನು / ಅಧಿಕಾರ ಇರುವುದಿಲ್ಲ.
ಪೊಲೀಸರಿಗೆ ಎರಡು ಕಾರಣಕ್ಕೆ ಲಾಠಿ ಮತ್ತು ಪಿಸ್ತೂಲ್ ನೀಡಲಾಗಿರುತ್ತದೆ. ಹಿಂಸೆಯನ್ನು ತಪ್ಪಿಸಲು, ಸ್ವಯಂ ರಕ್ಷಣೆಗೆ. ಎರಡು ಗುಂಪುಗಳು ಹೊಡೆದಾಡಿಕೊಳ್ಳುತ್ತಿದರೆ ಅಥವಾ ಯಾವುದಾದರೂ ಗುಂಪು / ವ್ಯಕ್ತಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಮಾಡುತ್ತಿದ್ದರೆ ಲಾಠಿ ಬಳಸಬಹುದು.
ಲಾಠಿಯನ್ನು ಮೂರು ವಿಧದಲ್ಲಿ ಪ್ರಯೋಗ ಮಾಡಬೇಕು.
1. ಲಾಠಿ ಬೀಸಿ ಜನರನ್ನು ಚದುರಿಸುವುದು.
2. ಲಘು ಲಾಠಿ ಪ್ರಹಾರ.
3. ಲಾಠಿ ಪ್ರಹಾರ.
ಪಿಸ್ತೂಲ್ ಬಳಸುವ ಸಂದರ್ಭದಲ್ಲಿ ಎದುರಾಳಿಗೆ ಸೂಚನೆ ಕೊಟ್ಟು ಗಾಳಿಯಲ್ಲಿ ಗುಂಡು ಹಾರಿಸಬೇಕು. ಆಗಲೂ ಸ್ವಯಂ ರಕ್ಷಣೆ ಸಾಧ್ಯವಾಗದೇ ಇದ್ದರೆ ಪ್ರಾಣ ಹಾನಿಯಾಗದ ರೀತಿಯಲ್ಲಿ ಕಾಲಿಗೆ ಹೊಡೆಯಬೇಕು. ಇದನ್ನು ಬಿಟ್ಟು ದಾರಿಯಲ್ಲಿ ಹೋಗುವ ವ್ಯಕ್ತಿಗಳ ಮೇಲೆ ಪೊಲೀಸರು ಪಿಸ್ತೂಲ್ ಬಳಸುವಂತಿಲ್ಲ. ಹಾಗೂ ಸಂಘಟಿತವಲ್ಲದ / ಗುಂಪು ಸೇರದ ವ್ಯಕ್ತಿಗಳ ಮೇಲೆ ಪೊಲೀಸರು ನೇರವಾಗಿ ಹಲ್ಲೆ ನಡೆಸುವಂತಿಲ್ಲ. @ಟಿ.ಕೆ.ಹನುಮಂತರಾಜು
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….