ದೊಡ್ಡಬಳ್ಳಾಪುರ: ತಾಲೂಕು ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದಿಂದ ಫೋಟೋ / ವಿಡಿಯೋಗ್ರಾಫರ್ ಗಳಿಗೆ, ಕೋವಿಡ್-19 ಲಸಿಕೆ ನೀಡುವ ಅಭಿಯಾನವನ್ನು ನಗರದ ಹೊರವಲಯದಲ್ಲಿನ ಕುರುಬರಹಳ್ಳಿಯ ಸರ್ಕಾರಿ ಶಾಲೆ ಆವರಣದಲ್ಲಿ ಆಯೋಜಿಸಲಾಗಿತ್ತು.
ಈ ವೇಳೆ ಸಂಘದ ಸುಮಾರು 60ಕ್ಕು ಹೆಚ್ಚು ಸದಸ್ಯರಿಗೆ ಲಸಿಕೆ ಹಾಕಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಹೆಚ್.ಆರ್.ಸುರೇಶ್, ಸಂಘದ ಹಿರಿಯರ ಸಹಕಾರದಿಂದ ಮೊದಲ ಹಂತವಾಗಿ ಸಂಘದ ಸದಸ್ಯರಿಗೆ ಕೋವಿಡ್ ಲಸಿಕೆ ಹಾಕಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಛಾಯಾಗ್ರಾಹಕರ ಕುಟುಂಬಗಳಿಗೆ ಹಾಗೂ ಛಾಯಾಗ್ರಾಹಕರಿಗೆ ಕೊಡಿಸುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.
ಛಾಯಾ ಸುರಕ್ಷಾ: ತಾಲೂಕಿನ ಛಾಯಾಗ್ರಾಹಕರ ಹಿತದೃಷ್ಟಿಯಿಂದ, ಈಗಾಗಲೇ ನಮ್ಮ ಸಂಘದಿಂದ ಛಾಯಾ ಸುರಕ್ಷಾ ಯೋಜನೆ ಚಾಲನೆ ಮಾಡಿ ಒಂದು ವರ್ಷ ತುಂಬಿದೆ. ಛಾಯಾ ಸುರಕ್ಷಾ ಯೋಜನೆಯನ್ನು ಕಳೆದ ವರ್ಷ ಮಾಡಿಸಿರುವ ಎಲ್ಲರೂ ರಿನಿವಲ್ ಮಾಡಿಸಲು ಅವಕಾಶ ನೀಡಲಾಗಿದೆ.ಹೊಸದಾಗಿ ಛಾಯಾ ಸುರಕ್ಷಾ ಯೋಜನೆ ಪಡೆಯುವವರಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಸುರೇಶ್ ತಿಳಿಸಿದರು.
ಈ ವೇಳೆ ಸಂಘದ ಗೌರವ ಅಧ್ಯಕ್ಷ ಬಸವರಾಜಯ್ಯ, ಕಾರ್ಯದರ್ಶಿ ಅರುಣ್ ಕುಮಾರ್, ಸಹ ಕಾರ್ಯದರ್ಶಿ ಲೋಕೇಶ್, ಖಜಾಂಚಿ ಗುರು ಶಂಕರಯ್ಯ ಸೇರಿದಂತೆ ನಿರ್ದೇಶಕರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….