ದೊಡ್ಡಬಳ್ಳಾಪುರ: ತಾಲೂಕಿನ ಐದು ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರಗಳ ನೂತನ ಕಟ್ಟಡಗಳ ನಿರ್ಮಾಣ ಕಾರ್ಯಕ್ಕೆ ಶಾಸಕ ಟಿ.ವೆಂಕಟರಮಣಯ್ಯ ಶಂಕುಸ್ಥಾಪನೆ ನೆರವೇರಿಸಿದರು.
ಖನಿಜ ಪ್ರತಿಷ್ಠಾನ ಇಲಾಖೆಯ ಅಂದಾಜು ರೂ 75ಲಕ್ಷ ಅನುದಾನದಲ್ಲಿ, ತಾಲೂಕಿನ ಬೈರಸಂದ್ರ, ಉಜ್ಜನಿ, ಬೆನಸೀಹಟ್ಟಿ, ಹಸನ್ ಘಟ್ಟ, ದಡಿಘಟ್ಟಮಡಗು ಗ್ರಾಮಗಳ ಅಂಗನವಾಡಿ ಕೇಂದ್ರಗಳ ನೂತನ ಕಟ್ಟಡ ಕಾಮಗಾರಿಗೆ ವೆಂಕಟರಮಣಯ್ಯ ಶಂಕುಸ್ಥಾಪನೆ ನೆರವೇರಿಸಿದರು.
ಇದೇ ವೇಳೆ ಕನಸವಾಡಿಯಲ್ಲಿ ಸುಮಾರು ರೂ 75 ಲಕ್ಷ ಅನುದಾನದ ಡಾ.ಅಂಬೇಡ್ಕರ್ ಭವನಕ್ಕು ಚಾಲನೆ ನೀಡಲಾಯಿತು.
ಸಿಡಿಪಿಒ ಅನಿತಾಲಕ್ಷ್ಮೀ, ಜಿಪಂ ಮಾಜಿ ಸದಸ್ಯ ಚುಂಚೇಗೌಡ, ತಾಪಂ ಮಾಜಿ ಸದಸ್ಯ ಹಸನ್ ಘಟ್ಟರವಿ, ಚೆನ್ನಮ್ಮರಾಮಲಿಂಗಯ್ಯ, ಆರೂಢಿ ಗ್ರಾಪಂ ಅಧ್ಯಕ್ಷೆ ಜಯಮ್ಮ ಪ್ರಭು ಸೇರಿದಂತೆ ಸ್ಥಳೀಯ ಮುಖಂಡರು, ಅಂಗವಾಡಿ ಕಾರ್ಯಕರ್ತೆಯರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….