ದೊಡ್ಡಬಳ್ಳಾಪುರ: ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ವತಿಯಿಂದ ತಾಲೂಕಿನ ಹಲವೆಡೆ ಸಾರ್ವಜನಿಕರಿಗೆ ಕರೊನಾ ತಡೆ ಪರಿಕರಗಳಾದ ಸ್ಯಾನಿಟೈಸರ್, ಮಾಸ್ಕ್ ವಿತರಿಸಿ ಕರೊನಾ ಜಾಗೃತಿ ಮೂಡಿಸಲಾಯಿತು.
ಇದೇ ವೇಳೆ ದೊಡ್ಡಬಳ್ಳಾಪುರ ನಗರ ಭಾಗದಲ್ಲಿ ಕಾರ್ಯನಿರತರಾಗಿರುವ ಕೋವಿಡ್ ವಾರಿಯರ್ಸ್ ಗಳಾದ ಪೊಲೀಸ್ ಸಿಬ್ಬಂದಿಗೆ ಸ್ಯಾನಿಟೈಸರ್, ನೀರಿನ ಬಾಟಲ್ ಗಳನ್ನು ಕೊಟ್ಟು ಕೃತಜ್ಞತೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ರಾಜ್ಯಾಧ್ಯಕ್ಷ ಬಿ.ಎಂ.ಚಿಕ್ಕಣ್ಣ, ರಾಜ್ಯ ಸದಸ್ಯ ಕೆ.ನವೀನ್ ಕುಮಾರ್, ತಾಲೂಕು ಕಮಿಟಿಯ ಅಧ್ಯಕ್ಷ ಅರವಿಂದ್, ಕಮಿಟಿಯ ಪದಾಧಿಕಾರಿಗಳಾದ ಪ್ರಭಾಕರ್, ಸಣ್ಣಪ್ಪ, ಚೆನ್ನಕೇಶವ, ಶ್ರೀಧರ್, ಹನುಮಂತರಾಜು ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..