ಬೆಂ.ಗ್ರಾ.ಜಿಲ್ಲೆ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ 376 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಹೊಸದಾಗಿ 125 ಕರೊನಾ ಪ್ರಕರಣಗಳು ಹಾಗೂ ಮೂರು ಮಂದಿ ಸಾವನ್ನಪ್ಪಿರುವುದು ಬುಧವಾರ ವರದಿಯಾಗಿದೆ.
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಬುಲೆಟಿನ್ ವರದಿಯನ್ವಯ ದೊಡ್ಡಬಳ್ಳಾಪುರ ತಾಲೂಕಿನ 22 ಪುರುಷರು, 11 ಮಂದಿ ಮಹಿಳೆಯರು ಸೇರಿ 33. ದೇವನಹಳ್ಳಿ ತಾಲೂಕಿನ 18 ಪುರುಷರು, 15 ಮಹಿಳೆ ಸೇರಿ 33. ನೆಲಮಂಗಲ ತಾಲೂಕಿನ 22 ಪುರುಷರು, 08 ಮಹಿಳೆಯರು ಸೇರಿ 30 ಹಾಗೂ ಹೊಸಕೋಟೆ ತಾಲೂಕಿನ 16 ಪುರುಷರು, 08 ಮಹಿಳೆಯರು ಸೇರಿ 24 ಮತ್ತು ಅನ್ಯ ಜಿಲ್ಲೆಯವರು ಸೇರಿ ಒಟ್ಟು ಜಿಲ್ಲೆಯಲ್ಲಿ 125 ಜನರಿಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಮೃತರ ವರದಿ: ನೆಲಮಂಗಲ ತಾಲೂಕಿನ 73 ವರ್ಷದ ವೃದ್ಧೆ, 48 ವರ್ಷದ ಪುರುಷ. ದೇವನಹಳ್ಳಿ ತಾಲೂಕಿನ 51 ವರ್ಷದ ಸೋಂಕಿತ ಪುರುಷ ಸಾವನಪ್ಪಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಜಿಲ್ಲೆಯಲ್ಲಿ 436 ಮಂದಿ ಸೋಂಕಿತರನ್ನು ನಿಗಾ ಘಟಕದಲ್ಲಿಡಲಾಗಿದೆ ಎನ್ನಲಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2383ಕ್ಕೆ ಇಳಿಕೆಯಾಗಿದೆ. ಅಲ್ಲದೆ 11812 ಮಂದಿಯನ್ನು ಕಡ್ಡಾಯ ಗೃಹ ಬಂಧನದಲ್ಲಿ ಇಡಲಾಗಿದೆ.
ಇಂದಿನ ವರದಿಯ ಪ್ರಕಾರ 4235 ಮಂದಿಯ ಮಂದಿಯ ಫಲಿತಾಂಶ ಬಾಕಿ ಉಳಿದಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..