ಬೆಂ.ಗ್ರಾ.ಜಿಲ್ಲೆ: ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮವು ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಶಿಕ್ಷಕರು, ಪ್ರವಾಸಿ ಮಾರ್ಗದರ್ಶಿಗಳು, ಹೋಟೇಲ್ ಉದ್ಯೋಗಿಗಳೂ ಸೇರಿದಂತೆ ಇನ್ನಿತರ ವಲಯಗಳಲ್ಲಿ ಉದ್ಯೋಗ ಕಳೆದುಕೊಂಡಿರುವವರಿಗಾಗಿ ಉದ್ಯೋಗಕ್ಕಾಗಿ ಕೌಶಲ್ಯ ಕಾರ್ಯಕ್ರಮದ ಮೂಲಕ ಹೊಸ ಕೌಶಲ್ಯ ಕಲಿಕೆ ಹಾಗೂ ಉಚಿತ ತರಬೇತಿಯನ್ನು ನೀಡಲಿದ್ದು, ಆಸಕ್ತರು ನೋಂದಣಿಯಾಗಬಹುದು.
ಆಸಕ್ತರು ತಮ್ಮ ವಿವರಗಳನ್ನು https://covidhopes.kaushalkar.com ಇಲ್ಲಿ ಭರ್ತಿ ಮಾಡಿ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಲಕ್ಷ್ಮೀನಾರಾಯಣ ರಾಜು ಮೊ.ಸಂ.: 9916852249, ದರ್ಶಿನಿ ಮೊ.ಸಂ.:8970122219, ಸಾದಿಕ್ ಪಾಷ ಮೊ.ಸಂ.: 8618389432 4, ಕಿರಣ್ ಮೊ.ಸಂ.: 9964355618 ಹಾಗೂ ಇ-ಮೇಲ್ [email protected] ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..