ಆಡಳಿತ ಸುಧಾರಣೆಗಾಗಿ ಹಾಗೂ ಗ್ರಾಮಗಳ ಅಭಿವೃದ್ಧಿಗಾಗಿ ಗ್ರಾಮಪಂಚಾಯಿತಿ, ತಾಲೂಕುಪಂಚಾಯಿತಿ, ಜಿಲ್ಲಾಪಂಚಾಯಿತಿಗಳನ್ನು ಸ್ಥಾಪಿಸಲಾಗಿದೆ.
ಚುನಾವಣೆ ಮೂಲಕ ಸದಸ್ಯರನ್ನು ಮತದಾರರು ಆಯ್ಕೆ ಮಾಡಿದರೆ, ಸದಸ್ಯರುಗಳು ಪಂಚಾಯಿತಿಯ ಅಧ್ಯಕ್ಷ / ಉಪಾಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಈ ರೀತಿ ಆಯ್ಕೆಗೊಂಡವರ ಪದಚ್ಯುತಿ ಯಾವ ರೀತಿ ಮಾಡಬಹುದು ಎಂಬುದು ಅನೇಕರಲ್ಲಿ ಕಾಡುವುದು ಸಹಜ ಈ ಕುರಿತು ಒಂದು ವರದಿ ಇಲ್ಲಿದೆ.
೧,ಪಂಚಾಯಿತಿಗೆ ಆಯ್ಕೆಯಾದ ಸದಸ್ಯರು ತನ್ನ ಕರ್ತವ್ಯಗಳನ್ನು ನಿರ್ವಹಿಸುವಾಗ ದುರ್ನಡತೆ ಅಥವಾ ತಲೆ ತಗ್ಗಿಸುವಂತಹ ಕೆಲಸವನ್ನು ಮಾಡಿದಾಗ.
೨,ವೈದ್ಯಕೀಯವಾಗಿ ಸಾಮರ್ಥ್ಯ ಇಲ್ಲ ಎಂದು ಜಿಲ್ಲಾ ವೈದ್ಯ ಅಧಿಕಾರಿ ಪ್ರಮಾಣೀಕರಿಸಿದರೆ, ದಿವಾಳಿ ಅಥವಾ ಅಸ್ವಸ್ಥಚಿತ್ತದವನಾಗಿದರೆ.
೩,ಯಾವ ಸದಸ್ಯನ್ನು ಸತತವಾಗಿ 4 ಸಭೆಗಳಿಗೆ ಗೈರು ರಾಜರಾದ ಸಂದರ್ಭದಲ್ಲಿ ಮತ್ತು ಅಧ್ಯಕ್ಷ ಅಥವಾ ಉಪ-ಅಧ್ಯಕ್ಷ ಸಭೆಗಳನ್ನು ಕರೆಯಬೇಕಾಗಿದ್ದಾಗ ಅಥವಾ ವಿಶೇಷ ಸಂದರ್ಭದಲ್ಲಿ ಒಂದಾದ ಮೇಲೊಂದರಂತೆ ನಡೆಯಬೇಕಾದ ಎರಡು ಸಭೆಗಳನ್ನು ಕರೆಯಲು ತಪ್ಪಿದ್ದರೆ ವಿಚಾರಣೆ ನಂತರ ಪದಚ್ಯುತಿಗೆ ಅರ್ಹನಾಗುತ್ತಾರೆ.
೪,ಪಂಚಾಯಿತಿ ಸದಸ್ಯನು ಅಧ್ಯಕ್ಷ ಅಥವಾ ಉಪಾಧ್ಯಕ್ಷರ ಹುದ್ದೆಯ ವ್ಯಾಪಾರಕ್ಕಾಗಿ ಸಂದರ್ಭಕ್ಕೆ ಅನುಗುಣವಾಗಿ, ಯಾವುದೇ ಮತದಾರ ಅಥವಾ ಸದಸ್ಯರನ್ನು ಸೆಳೆಯುವುದು ಅಥವಾ ದಬ್ಬಾಳಿಕೆ ಅಥವಾ ವಂಚನೆ ಮಾಡಿದ್ದಾಗ.
೫,ಪಂಚಾಯಿತಿಯ ಯಾವುದೇ ಕಾಮಗಾರಿಗಳನ್ನು ಕಾರ್ಯಗತಗೊಳಿಸುವಾಗ, ಕರಾರು ಅಥವಾ ಕಾಮಗಾರಿಗೆ ಯಾವುದೇ ವ್ಯಾವಹಾರದಲ್ಲಿ ಕುಟುಂಬದ ಹತ್ತಿರದ ಸಂಬಂಧಿಯಾಗಿರುವ ಯಾವೊಬ್ಬ ವ್ಯಕ್ತಿಯನ್ನು ಪ್ರತ್ಯಕ್ಷವಾಗಿ ತೊಡಗಿಕೊಂಡಿರುವುದು ಕಂಡುಬಂದರೆ ಉದಾಹರಣೆಗೆ (ಕುಟುಂಬದ ಹತ್ತಿರದ ಸಂಬಂಧಿಗಳು ಎಂದರೆ ಪತ್ನಿ, ಪತಿ, ಮಗ, ಮಗಳು ಅಥವಾ ಮಲ ಮಗ, ಮಲ ಮಗಳು ಅಂತ ವ್ಯಕ್ತಿಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ ರಕ್ತಸಂಬಂಧವಾಗಿರಲಿ ಅಥವಾ ವಿವಾಹದಿಂದಾಗಲಿ ಸಂಬಂಧಿಸಿದ ಯಾವೊಬ್ಬ ವ್ಯಕ್ತಿಗಳು) ಅಥವಾ ಪಾಲುದಾರನಾಗಿ, ನೌಕರರಂತೆ ಅಥವಾ ಬೇರೆ ಸಂಘ-ಸಂಸ್ಥೆ ಮಂಡಳಿಯಲ್ಲಿ ಸದಸ್ಯನಂತೆ ಸಹಭಾಗಿಯಾಗಿರುವನೆಂದು ತಿಳಿದುಬಂದ ಸಂದರ್ಭಗಳಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅದಿನಿಧಿನಿಯಮ- 1993 ಅನ್ವಯ ಅಂತಹ ಸದಸ್ಯನಿಗೆ ನೋಟೀಸು ನೀಡಿ ಅವನ ಹೇಳಿಕೆಗಳನ್ನು ಹೇಳಿಕೊಳ್ಳಲು ಅವಕಾಶ ನೀಡಿ ವಿಚಾರಣೆ ಮಾಡಿದ ನಂತರ, ತೆಗೆದುಹಾಕುವುದು ಸೂಕ್ತವೆಂದು ಭಾವಿಸಿದರೆ ಸದಸ್ಯನ ಸದಸ್ಯತ್ವದಿಂದ ತೆಗೆದುಹಾಕಬಹುದು.
ಈ ರೀತಿ ಯಾವ ಅಧ್ಯಕ್ಷ, ಉಪಾಧ್ಯಕ್ಷ ಅಥವಾ ಸದಸ್ಯ ತನ್ನ ಸದಸ್ಯ ಸ್ಥಾನವನ್ನು ಕಳೆದುಕೊಂಡ ನಂತರ ಮುಂದಿನ ಆರು ವರ್ಷಗಳ ಕಾಲ ಯಾವುದೇ ಪಂಚಾಯಿತಿಯ ಚುನಾವಣೆಗಳಲ್ಲಿ ಸ್ಪರ್ಧಿಸಲು ಅನರ್ಹನಾಗಿರುತ್ತಾನೆ.@ಟಿ.ಕೆ.ಹನುಮಂತರಾಜು, 9740768291
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..