ರಾಷ್ಟ್ರೀಯ ಸ್ವಚ್ಛತಾ ಫಿಲ್ಮೋಂ ಕಾ ಅಮೃತ ಮಹೋತ್ಸವ ಅಂಗವಾಗಿ ರಾಷ್ಟ್ರಮಟ್ಟದ ಕಿರುಚಿತ್ರ ಸ್ಪರ್ಧೆ ಆಯೋಜನೆ

ಬೆಂಗಳೂರು: ಭಾರತ ಸರ್ಕಾರದ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜಲ ಶಕ್ತಿ ಮಂತ್ರಾಲಯದ ವತಿಯಿಂದ ಸ್ವಚ್ಛ ಭಾರತ್ ಮಿಷನ್ (ಗ್ರಾ) ಹಂತ-11 ಯೋಜನೆಯಡಿ “ರಾಷ್ಟ್ರೀಯ ಸ್ವಚ್ಛತಾ ಫಿಲ್ಮೋಂ ಕಾ ಅಮೃತ ಮಹೋತ್ಸವ” (ಅಜಾದ್ ಕಾ ಅಮೃತ ಮಹೋತ್ಸವ) ಎಂಬ ಹೆಸರಿನಡಿಯಲ್ಲಿ ರಾಷ್ಟ್ರ ಮಟ್ಟದ ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸಮಗ್ರ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ಮೂಲಕ ಎಲ್ಲಾ ಗ್ರಾಮಗಳಲ್ಲಿ ಶೌಚಾಲಯಗಳ ಬಳಕೆಯ ಸುಸ್ಥಿರತೆಯನ್ನು ಕಾಯ್ದುಕೊಂಡು  ಓಡಿಎಫ್‍ನ ಹಾದಿಯಲ್ಲಿ ಸಾಗುವ ಮೂಲಕ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆ (2014-2019) 1ನೇ ಹಂತದಲ್ಲಿ ಸಾಧಿಸಿದ ಅಸಾಮಾನ್ಯ ಮೈಲಿಗಲ್ಲನ್ನು ಮುಂದೆ ಸಾಗಿಸಲು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಉದ್ದೇಶಿಸಿದೆ. 

ಸ್ವಚ್ಛ ಭಾರತ್ ಮಿಷನ್ (ಗ್ರಾ)ಯೋಜನೆ ಹಂತ-11ರ ಉದ್ದೇಶಗಳಂತೆ ಓಡಿಎಫ್- ಪ್ಲಸ್  ಗುರಿಗಳ ಕುರಿತು ಗ್ರಾಮೀಣ ಜನರಲ್ಲಿ ಸಾಮೂಹಿಕ ಜಾಗೃತಿ ಮೂಡಿಸಲು ಈ ಸ್ಪರ್ಧೆಯು ಬೃಹತ್ ಮಾಹಿತಿ ಶಿಕ್ಷಣ ಮತ್ತು ಸಂವಹನ (ಐ.ಇ.ಸಿ.) ಅಭಿಯಾನವಾಗಿ ಕಾರ್ಯನಿರ್ವಹಿಸಲಾಗಿದ್ದು, ವ್ಯಕ್ತಿಗಳು ಮತ್ತು ಸಂಸ್ಥೆಗಳ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಮೂಲಕ ಓಡಿಎಫ್-ಪ್ಲಸ್  ಘಟಕಾಂಶಗಳ ಕುರಿತು ಕಿರುಚಿತ್ರಗಳ ಸ್ವರೂಪದಲ್ಲಿ ಅವರ ವಿವಿಧ ಆಲೋಚನೆಗಳು ಮತ್ತು ಸೃಜನಶೀಲತೆಯನ್ನು ಸೆರೆಹಿಡಿಯಲು ಇದು ಸಹಕಾರಿಯಾಗಲಿದೆ.

ಪ್ರಶಸ್ತಿ ವಿವರ ಮತ್ತು ಭಾಗವಹಿಸುವಿಕೆಯ ವಿಷಯಗಳ ವಿವರ ಇಂತಿದೆ. ಸ್ವಚ್ಛ ಭಾರತ್ ಮಿಷನ್ (ಗ್ರಾ)ಯೋಜನೆ ಹಂತ-11ರ ಘಟಕಾಂಶಗಳ ಕುರಿತು ಎರಡು ವಿಭಾಗಗಳಲ್ಲಿ / ಎರಡು ವರ್ಗಗಳಲ್ಲಿ ಕಿರುಚಿತ್ರಗಳನ್ನು ತಯಾರಿಸಬಹುದಾಗಿದೆ.

ಒಬ್ಬ ವ್ಯಕ್ತಿ ಮತ್ತು ಸಂಸ್ಥೆಗಳು ಹಲವು ಕಿರುಚಿತ್ರಗಳನ್ನು ತಯಾರಿಸಿ ಸಲ್ಲಿಸಬಹುದಾಗಿದೆ. ಇದಕ್ಕೆ ಯಾವುದೇ ಮಿತಿ ಇರುವುದಿಲ್ಲ. ಕಿರುಚಿತ್ರ ತಯಾರಿಸಬೇಕಾದ ವಿಷಯಗಳು ಮತ್ತು ಪ್ರಶಸ್ತಿ ಮೊತ್ತ ವಿವರ ಈ ಕೆಳಕಂಡಂತಿದೆ.

ಒಂದನೇ ವರ್ಗ: (ವಿಷಯಾಧಾರಿತ) ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆ ಹಂತ-11ರ ಅಥವಾ ಓಡಿಎಫ್ ಪ್ಲಸ್  ನ ಘಟಕಾಂಶಗಳನ್ನು ಆಧರಿಸಿದೆ. ಜೈವಿಕ ವಿಘಟನೆಯ ತ್ಯಾಜ್ಯ ನಿರ್ವಹಣೆ, ಗೋಬರ್ಧನ್, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ಬೂದು ನೀರು ನಿರ್ವಹಣೆ, ಮಲ ತ್ಯಾಜ್ಯ ನಿರ್ವಹಣೆ ಹಾಗೂ ನಡವಳಿಕೆ ಬದಲಾವಣೆ ಈ ಪ್ರತಿ ವಿಷಯಕ್ಕೂ ಮೂರು ಬಹುಮಾನಗಳನ್ನು ನೀಡಲಾಗುತ್ತದೆ.  ಪ್ರಥಮ ಬಹುಮಾನ 1,60,000 ರೂ.,  ಪ್ರಥಮ ರನ್ನರ್ ಅಪ್ ಬಹುಮಾನ 60,000 ರೂ. ಹಾಗೂ  ಎರಡನೇ ರನ್ನರ್ ಅಪ್ ಬಹುಮಾನ 30,000 ರೂ. ಗಳ ನಗದು ಬಹುಮಾನ ನೀಡಲಾಗುತ್ತದೆ.   

ಎರಡನೇ ವರ್ಗ: (ಭೌಗೊಳಿಕ ವರ್ಗ) ಇದು ಸಂಪೂರ್ಣವಾಗಿ ಭೌಗೋಳಿಕ ಪ್ರದೇಶದ ಮೇಲೆ ಕೇಂದ್ರಿಕರಿಸಿದೆ. ಈ ವಿಭಾಗದಲ್ಲಿ ಕಿರುಚಿತ್ರವು ಸಮಗ್ರ ಸ್ವಚ್ಛತಾ ಸಂದೇಶಗಳನ್ನು ಸೆರೆಹಿಡಿಯಬೇಕು ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಹೊಸದಾಗಿ ಪರಿಹಾರಗಳನ್ನು ಒದಗಿಸಬೇಕು. ಈ ಎರಡೂ ವರ್ಗಗಳಲ್ಲಿ ಕಿರುಚಿತ್ರಗಳು ಗ್ರಾಮೀಣ ಸೊಗಡಿನಲ್ಲಿರಬೇಕು. ಆದಾಗ್ಯೂ ಈ ಸ್ವಚ್ಛತಾ ಸಂದೇಶಗಳು ಅಥವಾ ಪರಿಹಾರಗಳು ಐದು ಭೌಗೋಳಿಕ ಪ್ರದೇಶಗಳಲ್ಲಿ ಅನುಸರಿಸಲು ನಿರ್ದಿಷ್ಟವಾಗಿರಬೇಕು. ಕೆಳಕಂಡ ಐದು ಭೌಗೋಳಿಕ ಪ್ರದೇಶಗಳಲ್ಲಿ ಯಾವುದನ್ನಾದರೂ ಕೇಂದ್ರಿಕರಿಸಿ ಅನೇಕ ಚಲನಚಿತ್ರಗಳನ್ನು ತಯಾರಿಸಿ ಸಲ್ಲಿಸಬಹುದಾಗಿದೆ.

ಮರುಭೂಮಿ ಪ್ರದೇಶಗಳು, ಗುಡ್ಡಗಾಡು ಪ್ರದೇಶಗಳು, ಕರಾವಳಿ ಪ್ರದೇಶಗಳು, ಬಯಲು ಸೀಮೆ ಹಾಗೂ ಪ್ರವಾಹ ಪೀಡಿತ ಪ್ರದೇಶಗಳು ಸ್ಪರ್ಧೆಯ ವಿಷಯವಾಗಿದ್ದು, ಪ್ರತಿ ವಿಷಯಕ್ಕೂ ಮೂರು ಬಹುಮಾನಗಳನ್ನು ನೀಡಲಾಗುತ್ತದೆ. ಪ್ರಥಮ ಬಹುಮಾನ 2,00,000 ರೂ., ಪ್ರಥಮ ರನ್ನರ್ ಅಪ್ ಬಹುಮಾನ 1,20,000 ರೂ. ಹಾಗೂ ಎರಡನೇ ರನ್ನರ್ ಅಪ್ ಬಹುಮಾನ 80,000 ರೂ. ನಗದು ಬಹುಮಾನ ನೀಡಲಾಗುತ್ತದೆ. ಈ ಕಿರುಚಿತ್ರಗಳನ್ನು ಸಿದ್ಧಪಡಿಸಿ www.mygov.in    ಅಥವಾ  https://innovateindia.mygov.in/sbmg-innovation-challengeನಲ್ಲಿ ಅಪ್‍ಲೋಡ್ ಮಾಡಬೇಕು. 

ಮೇಲ್ಕಂಡ ಬಹುಮಾನಗಳನ್ನು ಈ ವರ್ಷದ ಕೊನೆಯಲ್ಲಿ ನಡೆಯುವ ಸ್ವಚ್ಛ ಭಾರತ್ ಮಿಷನ್ ಸಮಾರಂಭದಲ್ಲಿ ಈ ಎರಡು ವಿಭಾಗಗಳಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಸನ್ಮಾನಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

ರಾಜಕೀಯ

ವಿಜಯೇಂದ್ರಗೆ ತಿರುಗುಬಾಣವಾದ ವಕ್ಫ್ ವಿವಾದ..!: CBI ತನಿಖೆಗೆ ಸಿಎಂ‌ ಆಗ್ರಹ

ವಿಜಯೇಂದ್ರಗೆ ತಿರುಗುಬಾಣವಾದ ವಕ್ಫ್ ವಿವಾದ..!: CBI ತನಿಖೆಗೆ ಸಿಎಂ‌ ಆಗ್ರಹ

"ನಾ ಖಾವೂಂಗಾ, ನಾ ಖಾನೆ ದೂಂಗಾ’’ ಎಂದು ಊರೆಲ್ಲ ಡಂಗೂರ ಹೊಡ್ಕೊಂಡು ತಿರುಗಾಡುವ ಮೋದಿಯವರೇ CBI

[ccc_my_favorite_select_button post_id="98674"]
Heart attack: 26 ವರ್ಷದ ಕಬ್ಬಡಿ ಆಟಗಾರನ ಬಲಿ ಪಡೆದ ಹೃದಯಾಘಾತ..!

Heart attack: 26 ವರ್ಷದ ಕಬ್ಬಡಿ ಆಟಗಾರನ ಬಲಿ ಪಡೆದ ಹೃದಯಾಘಾತ..!

ಹನುಮ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಕಬಡ್ಡಿ ಸ್ಪರ್ಧೆಯ ವೇಳೆ ಯುವಕನಿಗೆ ಹೃದಯಾಘಾತವಾಗಿದೆ; Heart attack

[ccc_my_favorite_select_button post_id="98669"]
ಸದನಕ್ಕೆ ಅಡ್ಡಿ: ಕಾಂಗ್ರೆಸ್ ವಿರುದ್ಧ ರೊಚ್ಚಿಗೆದ್ದ ಹೆಚ್.ಡಿ.ದೇವೇಗೌಡ| Video ನೋಡಿ| HD Deve Gowda

ಸದನಕ್ಕೆ ಅಡ್ಡಿ: ಕಾಂಗ್ರೆಸ್ ವಿರುದ್ಧ ರೊಚ್ಚಿಗೆದ್ದ ಹೆಚ್.ಡಿ.ದೇವೇಗೌಡ| Video ನೋಡಿ| HD Deve

ಸಭಾಪತಿ ಜಗದೀಪ್ ಧನಕರ್ ವಿರುದ್ಧ ಅವಿಶ್ವಾಸ ನೋಟಿಸ್ ಗೆ ಉಗ್ರ ಖಂಡನೆ| HD Deve Gowda

[ccc_my_favorite_select_button post_id="98469"]
ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

2023-24ರಲ್ಲಿ ಚೀನಾಗಿಂತಲೂ ಭಾರತೀಯ ವಿದ್ಯಾರ್ಥಿಗಳೇ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ (3.30 ಲಕ್ಷ) ಸಂಖ್ಯೆಯಲ್ಲಿ ತೆರಳಿದ್ದಾರೆ. Murder

[ccc_my_favorite_select_button post_id="97531"]

ಬಾಂಗ್ಲಾದಲ್ಲಿ ಹಿಂದೂ ಸಾಧು ಬಂಧನ; ನಾಳೆ ರಾಜ್ಯದಾದ್ಯಂತ

[ccc_my_favorite_select_button post_id="97359"]

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

ಕ್ರೀಡೆ

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World Chess Championship

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World

18 ವರ್ಷ ವಯಸ್ಸಿನ ಗ್ರಾ ಟ್ರ್ಯಂಡ್ ಮಾಸ್ಟರ್ ಗುಕೇಶ್ World Chess Championship

[ccc_my_favorite_select_button post_id="98503"]
ಅಲ್ಲು ಅರ್ಜುನ್ ಅಭಿಮಾನಿ ಆತ್ಮಹತ್ಯೆಗೆ ಯತ್ನ..!: ವೈರಲ್ Video ನೋಡಿ| Pushpa 2

ಅಲ್ಲು ಅರ್ಜುನ್ ಅಭಿಮಾನಿ ಆತ್ಮಹತ್ಯೆಗೆ ಯತ್ನ..!: ವೈರಲ್ Video ನೋಡಿ| Pushpa 2

ನಿನ್ನೆ ರಾತ್ರಿ ನಟ ಅಲ್ಲು ಅರ್ಜುನ್ ಬಿಡುಗಡೆಗೆ ಒತ್ತಾಯಿಸಿ ಅವರ ಅಭಿಮಾನಿಯೊಬ್ಬರು ತೆಲಂಗಾಣದ ಚಂಚಲಗುಡ ಜೈಲಿನ Pushpa 2

[ccc_my_favorite_select_button post_id="98679"]
Doddaballapura: ಅಪಘಾತ.. ಸ್ಕೂಟರ್ ಸವಾರ ಸ್ಥಳದಲ್ಲಿಯೇ ಸಾವು..!| Accident

Doddaballapura: ಅಪಘಾತ.. ಸ್ಕೂಟರ್ ಸವಾರ ಸ್ಥಳದಲ್ಲಿಯೇ ಸಾವು..!| Accident

ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡ. Accident

[ccc_my_favorite_select_button post_id="98685"]

ಆರೋಗ್ಯ

ಸಿನಿಮಾ

ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ, ವೇಣು..!| Allu Arjun

ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ, ವೇಣು..!| Allu Arjun

ಬಂಧನಕ್ಕೊಳಗಾಗಿದ್ದ ಅಲ್ಲು ಅರ್ಜುನ್ ಅವರು ಇಂದು ಬೆಳಿಗ್ಗೆಯಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. Allu arjun

[ccc_my_favorite_select_button post_id="98682"]