ಬೆಂಗಳೂರು: ದಿ.ಅಂಬರೀಷ್ ಅವರ ಸ್ಮಾರಕ ನಿರ್ಮಾಣ ವಿಚಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ತಮಗೆ ಅವಮಾನ ಮಾಡಿದ್ದು ನಿಜ ಅಂತ ಹಿರಿಯ ನಟ ದೊಡ್ಡಣ್ಣ ಸ್ಪಷ್ಟಪಡಿಸಿದ್ದಾರೆ.
ನಟ ದೊಡ್ಡಣ್ಣ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ವೇಳೆ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು. ಅಂಬರೀಶ್ ಸ್ಮಾರಕ ವಿಚಾರದಲ್ಲಿ ಕುಮಾರಸ್ವಾಮಿ ಅವಮಾನ ಮಾಡಿದ್ದು ನಿಜ.
ನಾನು ಮನವಿ ಪತ್ರ ಹಿಡಿದು ಅವರ ಭೇಟಿಗೆ ಹೋಗಿದ್ದಾಗ ಕೆಲವು ರಾಜಕಾರಣಿಗಳು ಇದ್ರು. ನಮ್ಮನ್ನ 2 ಗಂಟೆ ಕಾಯಿದಿಸಿದ ಬಳಿಕ ಒಳಗಡೆ ಬಿಟ್ರು. ನಾವು ಸ್ಮಾರಕದ ಕುರಿತು ಲೇಟರ್ ಕೊಟ್ಟಾಗ ಕುಮಾರಸ್ವಾಮಿ ಅಸಹನೆ ಪಟ್ರು. ನನ್ನ ನೋಡಿ.. ಇವರೆಲ್ಲ ಏನು ಸಾಧನೆ ಮಾಡಿದ್ದಾನೆ ಅಂತ ಸ್ಮಾರಕ ಮಾಡ್ತಿರೀ? ಎಂದು ಪೇಪರ್ ತಟ್ಟಂತ ಎಸೆದ್ರು. ಆಗ ನಾನು ಏನೂ ಮಾತನಾಡಲಿಲ್ಲ.
ನಂತರ ಆ ಲೇಟರ್ ಅಯ್ದುಕೊಂಡು ಜೇಬಿನಲ್ಲಿ ಇಟ್ಟುಕೊಂಡು ಬಂದೆ. ಆಗ ನನಗೆ ಧೈರ್ಯ ತಿಂಬಿದ್ದು ಹಿರಿಯ ನಟ ಎಸ್.ಶಿವರಾಮ್. ಬಳಿಕ ಸುಮಲತಾ ಬಳಿ ಕಣ್ಣೀರಿಟ್ಟುಕೊಂಡು ಹೋದೆ ಎಂದು. ಕಲಿಯುಗ ಕರ್ಣ ಅಂಬರೀಶ್ ಸ್ಮಾರಕ ನಿರ್ಮಿಸಿದ್ದು ಕುಮಾರಸ್ವಾಮಿ ಅಲ್ಲ ಯಡಿಯೂರಪ್ಪ ಎಂದವರು ತಿಳಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಡಾ.ರಾಜ್, ವಿಷ್ಣು, ಅಂಬಿ ಮೂವರು ದೇವರಿದ್ದಾರೆ. ಆ ದೇವರುಗಳಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ವಿಷ್ಣು ಸ್ಮಾರಕ ತಡವಾಗಿದೆ, ಸ್ಮಾರಕ ಆಗೇ ಆಗುತ್ತೆ. ಕೆಂಗಲ್ ಹನುಮಂತಯ್ಯ ವಿಧಾನಸೌಧ ಕಟ್ಟಿದ್ದರು. ಇದನ್ನು ನಾವು, ಮುಂದಿನ ತಲೆಮಾರು ಸಹ ಹೇಳುತ್ತದೆ ಅಂತ ದೊಡ್ಡಣ್ಣ ಹೇಳಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..