ದೊಡ್ಡಬಳ್ಳಾಪುರ: ಕೋವಿಡ್ ನಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ 10ನೇ ತರಗತಿಯ ವರೆಗೆ ಉಚಿತ ಶಿಕ್ಷಣ ನೀಡಲಾಗುವುದೆಂದು ನಗರದ ಪ್ರತಿಷ್ಠಿತ MSV ಶಾಲೆಯ ಮುಖ್ಯಸ್ಥ ಎ.ಸುಬ್ರಮಣ್ಯ ತಿಳಿಸಿದ್ದಾರೆ.
ಹರಿತಲೇಖನಿಯೊಂದಿಗೆ ಮಾತನಾಡಿದ ಅವರು, ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಹೆತ್ತವರನ್ನು ಕಳೆದುಕೊಂಡವರ ಮಕ್ಕಳ ಶೈಕ್ಷಣಿಕ ಜೀವನದ ಬಗ್ಗೆ ನಮ್ಮ ಶಾಲೆ ಕಾಳಜಿ ವಹಿಸಲಿದೆ.
ಕೋವಿಡ್ -19 ಸಾಂಕ್ರಾಮಿಕವು ಅನೇಕ ಕುಟುಂಬಗಳನ್ನು ಘಾಸಿಗೊಳಿಸಿದೆ. ಶಾಲೆಗೆ ತೆರಳುತ್ತಿದ್ದ, ತೆರಳಬೇಕಿದ್ದ ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಂಡಿದ್ದಾರೆ. ಕರೊನಾದಿಂದ ತಂದೆತಾಯಿಯನ್ನು ಕಳೆದುಕೊಂಡಿರುವ ಮಕ್ಕಳು ತಮ್ಮ ಜೀವನದ ಬಗ್ಗೆ ಚಿಂತಿಸಬಾರದು, ನಮ್ಮ MSV ಶಾಲೆಯಲ್ಲಿ 1 ರಿಂದ 10ನೇ ತರಗತಿಯ ವರೆಗೆ ಸಿಬಿಎಸ್ ಇ ಅಡಿಯಲ್ಲಿ ಉಚಿತ ಶಿಕ್ಷಣ, ಸಮವಸ್ತ್ರ, ಪುಸ್ತಕ ನೀಡಲಾಗುವುದು ಎಂದಿದ್ದಾರೆ.
ಇಡೀ ವಿಶ್ವವನ್ನೆ ಕರೊನಾ ಮಹಾಮಾರಿ ತನ್ನ ಕರಾಳತನ ತೊರಿದ್ದು, ಈ ನಿಟ್ಟಿನಲ್ಲಿ ನಮ್ಮ ಶಾಲೆ ಕರೊನಾದಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಸಂಕಷ್ಟದ ಸಮಯದಲ್ಲಿ ಸಮಾಜಕ್ಕೆ ನಮ್ಮ ಕೈಲಾದ ನೆರವನ್ನು ನೀಡಲು ಮುಂದಾಗಿದೆ ಎಂದರು.
ಇದರ ಸದುಪಯೋಗ ಪಡೆಯಲು MSV ಶಾಲೆಯನ್ನು ಭೇಟಿ ಮಾಡಬೇಕು, ಹಾಗೂ ಇದರ ಅವಶ್ಯಕತೆ ಇರುವವರಿಗೆ ಈ ಕುರಿತು ತಿಳಿಸುವಂತೆ ಸುಬ್ರಮಣ್ಯ ಓದುಗರಲ್ಲಿ ಮನವಿ ಮಾಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..