ಬೆಂ.ಗ್ರಾ.ಜಿಲ್ಲೆ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಚಿಕಿತ್ಸೆಗೆ ದಾಖಲಾಗಿದ್ದ 58 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಹೊಸದಾಗಿ 47 ಕರೊನಾ ಪ್ರಕರಣಗಳು ಹಾಗೂ ಇಬ್ಬರು ಸಾವನಪ್ಪಿರುವುದು ವರದಿಯಾಗಿದೆ.
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಬುಲೆಟಿನ್ ವರದಿಯನ್ವಯ ನೆಲಮಂಗಲ ತಾಲೂಕಿನ 05 ಪುರುಷರು, 03 ಮಹಿಳೆಯರು ಸೇರಿ 08. ದೇವನಹಳ್ಳಿ ತಾಲೂಕಿನ 08 ಪುರುಷರು. 06 ಮಹಿಳೆಯರು ಸೇರಿ 14. ದೊಡ್ಡಬಳ್ಳಾಪುರ ತಾಲೂಕಿನ 04 ಪುರುಷರು, ಓರ್ವ ಮಹಿಳೆ ಸೇರಿ 05 ಹಾಗೂ ಹೊಸಕೋಟೆ ತಾಲೂಕಿನ 06 ಪುರುಷರು, 07 ಮಹಿಳೆಯರು ಸೇರಿ 13 ಮತ್ತು ಅನ್ಯ ಜಿಲ್ಲೆಯವರು ಸೇರಿ ಒಟ್ಟು ಜಿಲ್ಲೆಯಲ್ಲಿ 57 ಜನರಿಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಮೃತರ ವರದಿ: ದೇವನಹಳ್ಳಿ ತಾಲೂಕಿನ ತಾಲೂಕಿನ 53 ವರ್ಷದ ಪುರುಷ, ಬೆಂಗಳೂರು ಉತ್ತರ ತಾಲೂಕಿನ 41 ವರ್ಷದವರು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ ಎಂದು ಬುಲೆಟಿನ್ ವರದಿ ತಿಳಿಸಿದೆ.
ಪ್ರಸ್ತುತ ಜಿಲ್ಲೆಯಲ್ಲಿ 284 ಮಂದಿ ಸೋಂಕಿತರನ್ನು ನಿಗಾ ಘಟಕದಲ್ಲಿಡಲಾಗಿದೆ ಎನ್ನಲಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 681ಕ್ಕೆ ಇಳಿಕೆಯಾಗಿದೆ. ಅಲ್ಲದೆ 2911 ಮಂದಿಯನ್ನು ಕಡ್ಡಾಯ ಗೃಹ ಬಂಧನದಲ್ಲಿ ಇಡಲಾಗಿದೆ.
ಇಂದಿನ ವರದಿಯ ಪ್ರಕಾರ 2368 ಮಂದಿಯ ಮಂದಿಯ ಫಲಿತಾಂಶ ಬಾಕಿ ಉಳಿದಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..