ದೊಡ್ಡಬಳ್ಳಾಪುರ: ತಾಲ್ಲೂಕಿನ ನಂದಿಬೆಟ್ಟದ ತಪ್ಪಲಿನ ಚನ್ನರಾಯಸ್ವಾಮಿ ಬೆಟ್ಟಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ರಾತ್ರಿ ಬೆಟ್ಟದಲ್ಲಿ ತಂಗಿದ್ದ ಚಾರಣಿಗರಿಗೆ ಅರಣ್ಯ ಇಲಾಖೆ ಸಿಬ್ಬಂದಿ ದಂಡ ವಿಧಿಸಿದ್ದಾರೆ.
ತಾಲ್ಲೂಕಿನ ಚನ್ನರಾಯಸ್ವಾಮಿ ಬೆಟ್ಟ ಹಾಗೂ ಮಾಕಳಿ ಬೆಟ್ಟಗಳು ಇಕೋ ಟ್ಯೂರಿಸಂ ಪಟ್ಟಿಗೆ ಸೇರಿವೆ. ಈ ಬೆಟ್ಟಗಳಿಗೆ ಚಾರಣ ಕೈಗೊಳ್ಳುವುವವರು ಆನ್ಲೈನ್ ಮೂಲಕ ಮುಂಗಡವಾಗಿಯೇ ನೋಂದಣಿ ಮಾಡಿಕೊಂಡು ಶುಲ್ಕ ಪಾವತಿಸಿದ ನಂತರವೇ ಚಾರಣ ಕೈಗೊಳ್ಳಬೇಕಿದೆ.
ತಾಲ್ಲೂಕಿನಲ್ಲಿ ಇತ್ತೀಚೆಗೆ ಮಳೆಯಾಗುತ್ತಿರುವುದರಿಂದ ಚನ್ನರಾಯಸ್ವಾಮಿ ಬೆಟ್ಟದಲ್ಲಿ ಸಣ್ಣ ಪುಟ್ಟ ಝರಿಗಳು, ಕಿರು ಜಲಪಾತಗಳು ದುಮ್ಮಿಕ್ಕುತ್ತಿವೆ. ಹೀಗಾಗಿ ಬೆಂಗಳೂರು ಸೇರಿದಂತೆ ನಾನಾ ಭಾಗದಿಂದ ಬೆಟ್ಟಕ್ಕೆ ಚಾರಣಕ್ಕೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಕಾವಲು ಆರಂಭಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..