ದೊಡ್ಡಬಳ್ಳಾಪುರ: ಹಾಡು ಹಗಲೆ ನಗರದಲ್ಲಿ ಕಳ್ಳರು ಕೈ ಚಳಕ ತೋರಿಸಿದ್ದಾರೆ. ಹಣವನ್ನು ದ್ವಿಚಕ್ರ ವಾಹನದ ಡಿಕ್ಕಿಯಲ್ಲಿಟ್ಟು ಕಾಪಿ ಕುಡಿದು ಬರುವ ವೇಳೆಗೆ ಖದೀಮರು ಹಣ ಲಪಟಾಯಿಸಿದ್ದಾರೆ.
ಇಂದು ಮಧ್ಯಾಹ್ನ ಟಿಬಿ ನಾರಾಯಣಪ್ಪ ಬಡಾವಣೆಯ ನಿವಾಸಿ ರಮೇಶ್ ಎಂಬಾತ, ಗೆಳೆಯನಿಗೆ ನೀಡಬೇಕೆಂದು ನಗರದ ಕರ್ನಾಟಕ ಬ್ಯಾಂಕ್ ನಿಂದ ಹಣವನ್ನು ಡ್ರಾ ಮಾಡಿಕೊಂಡು ಕೋರ್ಟ್ ರಸ್ತೆಯ ಹೀರೋ ಶೋ ರೂಂ ಮುಂಬಾಗ ಗಾಡಿ ನಿಲ್ಲಿಸಿ ಟೀ ಕುಡಿಯುವುದಕ್ಕೆ ಅಂಗಡಿಗೆ ತೆರಳಿದಾಗ ಕಳ್ಳರು ಹಣ ದೋಚಿ ಪರಾರಿಯಾಗಿದ್ದಾರೆ.
ಬ್ಯಾಂಕಿನಿಂದ ಹಣ ತರುವ ಕುರಿತು ಸಂಪೂರ್ಣ ಹೊಂಚು ಹಾಕಿರುವ ಕಳ್ಳರು, ಹಿಂಬಾಲಿಸಿ ಬಂದು ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ಘಟನೆಯ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಡಿವೈಎಸ್ಪಿ ರಂಗಪ್ಪ, ನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ಗೋವಿಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳೀಯವಾಗಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾ ಸಂಗ್ರಹ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದು, ಆರೋಪಿಗಳು ಎರಡು ವಾಹನಗಳಲ್ಲಿ ಬಂದು ಕೃತ್ಯ ನಡೆಸಿರುವುದು ಕಂಡುಬಂದಿದೆ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಕುಮಾರ್ ಹರಿತಲೇಖನಿಗೆ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..