ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರ ಮುಂಗಾರು ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಿರುವ ವಿದ್ಯುತ್ (ತಿದ್ದುಪಡಿ) 2021ರ ಪ್ರಸ್ತಾವನೆಯನ್ನು ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ವತಿಯಿಂದ ಸೋಮವಾರ ನಗರದ ಬೆಸ್ಕಾಂ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರೋಹಿತ್, ವಿದ್ಯುತ್ ಕ್ಷೇತ್ರದ ಖಾಸಗಿ ಕಾರಣದಿಂದ ಈಗ ರೈತರು, ನೇಕಾರರು,ಬಡವರಿಗೆ ದೊರೆಯುತ್ತಿರುವ ಎಲ್ಲಾ ರೀತಿಯ ಸಬ್ಸಿಡಿಗಳು ರದ್ದಾಗಲಿವೆ.ಖಾಸಗಿ ಕಂಪನಿ ನಿಗದಿಪಡಿಸುವ ಶುಲ್ಕವನ್ನು ಪಾವತಿ ಮಾಡಿದರಷ್ಟೇ ವಿದ್ಯುತ್ ಎನ್ನುವಂತಹ ಸ್ಥಿತಿ ನಿರ್ಮಾಣವಾಗಲಿದೆ. ಹಣವಂತರಷ್ಟೇ ವಿದ್ಯುತ್ ಉಪಯೋಗಿಸುವಂತಾಗಲಿದೆ. ನೌಕರರ ಉದ್ಯೋಗ ಭದ್ರತೆಗು ಅಪಾಯ ಎದುರಾಗಲಿದೆ. ಕೇಂದ್ರದ ವಿದ್ಯುತ್ ಕಾಯಿದೆ ಕುರಿತಂತೆ ನೌಕರರ ಸಂಘ ಕರೆ ನೀಡುವ ಯಾವುದೇ ರೀತಿಯ ಪ್ರತಿಭಟನೆಯಲ್ಲಿ ಎಲ್ಲರು ಸಕ್ರಿಯವಾಗಿ ಭಾಗವಹಿಸಲಾಗುವುದು ಎಂದರು.
ಪ್ರತಿಭಟನೆ ಸಭೆಯಲ್ಲಿ ನೌಕರರ ಸಂಘದ ನಗರ ಉಪವಿಭಾಗದ ಅಧ್ಯಕ್ಷ ರವಿಕುಮಾರ್, ಬೆಂಗಳೂರು ಗ್ರಾಮಾಂತರ ಸಂಘನಾ ಕಾರ್ಯದರ್ಶಿ ಜಿ.ಹನುಮಂತಗೌಡ, ಕಾರ್ಯದರ್ಶಿ ರಘುನಂದನ್, ಗ್ರಾಮೀಣ ಉಪವಿಭಾಗದ ಅಧ್ಯಕ್ಷ ಮುತ್ತುರಾಜ್, ಕಾರ್ಯದರ್ಶಿ ಚಿಕ್ಕಪ್ಪ, ಗ್ರಾಮೀಣ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್ ಇನಾಯಿತ್ ಉಲ್ಲಾಖಾನ್, ಶಾಖಾ ಅಧಿಕಾರಿಗಳಾದ ಮೋಹನ್ ಕುಮರ್ , ರಾಜಪ್ಪ, ಕಲ್ಯಾಣ ಅಧಿಕಾರಿ ಲೋಕೇಶ್ ನಾಯಕ್ , ಆರ್.ರಾಜೇಶ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..