ದೊಡ್ಡಬಳ್ಳಾಪುರ: ನಗರದ ಬಸ್ ನಿಲ್ದಾಣದಲ್ಲಿರುವ ಡಾ.ರಾಜ್‍ಕುಮಾರ್ ಕಲಾಮಂದಿರ(ಪುರಭವನ)ದ ಬಾಡಿಗೆ ದರವನ್ನು ಕಡಿಮೆ ಮಾಡುವಂತೆ ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘದ ವತಿಯಿಂದ ನಗರಸಭೆಗೆ ಮನವಿ ಸಲ್ಲಿಸಲಾಗಿದೆ.
ನಗರಸಭೆ ಪೌರಾಯುಕ್ತ ರಮೇಶ್.ಎಸ್.ಸುಣಗಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ರಾಮಾಂಜಿನಪ್ಪ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಡಾ.ರಾಜ್‍ಕುಮಾರ್ ಕಲಾಮಂದಿರ ನಿತ್ಯದ ಬಾಡಿಗೆ ಸ್ವಚ್ಛತೆ ಮೊದಲಾಗಿ ಎಲ್ಲಾ ಖರ್ಚುಗಳು ಸೇರಿ 8 ಸಾವಿರ ರೂಗಳಾಗಿವೆ. ಇಲ್ಲಿ ನಾಟಕ ಮೊದಲಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವವರು ಬಹುತೇಕ, ನೇಕಾರರು, ರೈತರು, ಬಡ ಕಾರ್ಮಿಕರಾಗಿದ್ದು, ಈ ವೆಚ್ಚವನ್ನು ಭರಿಸುವುದು ಸಾಧ್ಯವಿಲ್ಲದಾಗಿದೆ. ಇದಲ್ಲದೇ ನಾಟಕ ಪ್ರದರ್ಶನಗಳಿಗೆ ಇಂದು ಹೆಚ್ಚಿನ ಹಣ ವೆಚ್ಚವಾಗಲಿದೆ.ಈ ನಿಟ್ಟಿನಲ್ಲಿ ನಗರಸಭೆಯು ತಾಲೂಕು ಕಲಾವಿದರ ಸಂಘದ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಪುರಭವನದ ದುಬಾರಿ ಬಾಡಿಗೆಯನ್ನು ಕಡಿಮೆ ಮಾಡುವುದರೊಂದಿಗೆ ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಬೇಕಿದೆ. ಕಲಾಮಂದಿರದಲ್ಲಿ ಮಹಿಳೆಯರಿಗೆ ಹಾಗೂ ವಸ್ತ್ರ ವಿನ್ಯಾಸಕ್ಕೆ ಪ್ರತ್ಯೇಕ ಕೊಠಡಿಯನ್ನು ನೀಡಬೇಕೆಂದು ಕೋರಲಾಗಿದೆ.
ಇದೇ ಮನವಿಯನ್ನು ಜಿಲ್ಲೆಯ ಅಪರ ಜಿಲ್ಲಾಕಾರಿ ವಿಜಯ.ವಿ.ರವಿಕುಮಾರ್ ಅವರಿಗೂ ನೀಡಲಾಗಿದೆ ಎಂದು ತಿಳಿಸಿದರು.
ಈ ವೇಳೆ ಉಪಾಧ್ಯಕ್ಷ ಮುನಿರಾಜು, ಸಹಕಾರ್ಯದರ್ಶಿ ಪ್ರಕಾಶ್ ರಾವ್, ನಿರ್ದೇಶಕ ಅಶ್ವಥ್, ಸದಸ್ಯರಾದ ಡಿ ವೆಂಕಟೇಶ್, ಕಲಾವಿದೆ ನಾಗರತ್ನಮ್ಮ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..