ದೊಡ್ಡಬಳ್ಳಾಪುರ: ಭೀಮನ ಅಮಾವಾಸ್ಯೆಯ ಹಿನ್ನೆಲೆ ನಗರದ ಹೊರವಲಯದಲ್ಲಿನ ಗುಂಡಪ್ಪ ಬಯಲಿನಲ್ಲಿ ಸಂಭ್ರಮ, ಸಡಗರದ ವಾತಾವರಣ ಕಂಡುಬಂತು.
ಬಾನಂಗಳದಲ್ಲಿ ಗಾಳಿಪಟಗಳ ಚಿತ್ತಾರ, ಚಿತ್ರವಿಚಿತ್ರ ಪಟಗಳ ಕಲೆ, ಬಾಲಕರು ವೃದ್ಧರಾಗಿ ಎಲ್ಲರಲ್ಲೂ ಒಂದೇ ರೀತಿ ಉತ್ಸಾಹ ನೋಡುಗರ ಗಮನ ಸೆಳೆಯಿತು.
ಭೀಮನ ಅಮಾವಾಸ್ಯೆಯ ದಿನ ದೊಡ್ಡಬಳ್ಳಾಪುರದಲ್ಲಿ ಗಾಳಿಪಟ ಹಾರಿಸುವ ಸಂಪ್ರದಾಯ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಅದರಂತೆ ಈ ವರ್ಷ ಕರೊನಾ ಮಧ್ಯೆ ಸ್ವಲ್ಪ ಬಿಡುವಿಗಾಗಿ, ಗಾಳಿಪಟ ಹಾರಿಸಿ ಸಂಭ್ರಮಿಸಲಾಯಿತು.
ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘದ ಸದಸ್ಯರೊಂದಿಗೆ ಹಲವಾರು ಗಾಳಿಪಟ ಆಸಕ್ತರು ಭಾಗವಹಿಸಿದ್ದರು. ಗಾಳಿಯ ಅಭಾವದಲ್ಲಿಯೂ ಗಾಳಿಪಟ ಹಾರಾಟ ಸಂಭ್ರಮ ಕಂಡು ಬಂತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..